ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ಸಜ್ಜಾಗಿರುವ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay) ನಟಿ ರಮ್ಯಾಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಇಂದು (ಶನಿವಾರ) ರಮ್ಯಾ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅಲ್ಲದೇ ಫೋಟೋವನ್ನು ರಮ್ಯಾಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟ್ಯಾಗ್ ಮಾಡಿ ಧನಂಜಯ್ ಹಂಚಿಕೊಂಡಿದ್ದಾರೆ. ಇದಕ್ಕೆ ಎಕ್ಸೈಟೆಡ್ ಫಾರ್ ಯುವರ್ ವೆಡ್ಡಿಂಗ್ ಧನಂಜಯ್ ಎಂದು ನಟಿ ಬರೆದುಕೊಂಡಿದ್ದಾರೆ.
Advertisement
Advertisement
ಫೆ.16ರಂದು ಡಾಲಿ ಮದುವೆ ಹಿನ್ನೆಲೆ ಸ್ಯಾಂಡಲ್ ವುಡ್ ನಟ, ನಟಿಯರು ಹಾಗೂ ರಾಜಕೀಯ ಗಣ್ಯರಿಗೆ ಈಗಾಗಲೇ ಡಾಲಿ ಮದುವೆ ಆಮಂತ್ರಣ ನೀಡಿದ್ದಾರೆ. ಸದ್ಯ ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
Advertisement
Advertisement
ಈಗಾಗಲೇ ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಸೇರಿದಂತೆ ಅನೇಕರಿಗೆ ಮದುವೆಗೆ ಆಹ್ವಾನಿಸಿದ್ದಾರೆ.