ನಟ ರಾಕ್ಷಸ ಡಾಲಿ ಧನಂಜಯ (Daali Dhananjay) ಅವರು ಇದೇ ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಆಕ್ಟರ್ ಡಾಲಿ ಲೈಫ್‌ಗೆ ಡಾಕ್ಟರ್ ಧನ್ಯತ ಎಂಟ್ರಿ ಕೊಟ್ಟಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದರ ನಡುವೆ ಭಾವಿ ಪತ್ನಿ ಧನ್ಯತಾಗೆ (Dhanyatha) ಉಂಗುರ ತೊಡಿಸಿ ವಿಶೇಷವಾಗಿ ಡಾಲಿ ಪ್ರಪೋಸ್ ಮಾಡಿದ್ದಾರೆ. ಹೊಸ ಜೋಡಿಯ ಪ್ರಪೋಸಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಧನ್ಯತ ಬರುವ ಮುನ್ನ ಡಾಲಿ ಸಿಂಗಲ್ ಲೈಫ್ ಹೇಗಿತ್ತು? ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. ಡಾಲಿ ಆಪ್ತ ಸ್ನೇಹಿತ ನಾಗಭೂಷಣ್ ಧ್ವನಿಯಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಬ್ಯಾಚುಲರ್ ಲೈಫ್ ಹೇಗಿತ್ತು? ಎಂಬುದನ್ನು ವಿವರಿಸಿ ನಂತರ ಧನ್ಯತ ಎಂಟ್ರಿ ಕೊಟ್ಟಿರೋದನ್ನು ತೋರಿಸಿದ್ದಾರೆ. ಇದನ್ನೂ ಓದಿ:ಕ್ರೇಜಿ ಕ್ವೀನ್ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್
ಡಾಕ್ಟರ್ ಅಮ್ಮ ಎಂದು ಡಾಲಿ ಹೇಳುತ್ತಾ, ಭಾವಿ ಪತ್ನಿಗೆ ಪ್ರೀತಿಯಿಂದ ಬೆರಳಿಗೆ ರಿಂಗ್ ತೊಡಿಸಿದ್ದಾರೆ. ಸಿಂಗಲ್ ಲೈಫ್ ಶುಭಂ ಹೇಳೋ ಸಮಯ ಬಂದಾಯ್ತು. ನೂರು ಬ್ಯಾಚುರಲ್ ಪಾರ್ಟಿಗಳೇ ಬರಲಿ. ನೂರು ಬ್ಯಾಚುಲರ್ ಪಾರ್ಟಿಗಳೇ ಬರಲಿ, ಸಾವಿರ ಸೋಲೋ ಟ್ರಿಪ್‌ಗಳೇ ಇರಲಿ. ನಿನ್ನಾ ಜೊತೆ ರೀಲ್ಸ್ ಮಾಡಿಕೊಂಡು ಇರುತ್ತೇನೆ. ಬನ್ನಿ ನಾವಿಬ್ಬರೂ ಹಸೆಮಣೆ ಏರುತ್ತಿರುವಾಗ ನೀವೆಲ್ಲಾ ಸಾಕ್ಷಿಯಾಗಿರಬೇಕು. ನೀವು ಅಕ್ಷತೆ ಹಾಕಬೇಕು. ಮಿಸ್ ಮಾಡದೇ ಬಂದು ಹಾರೈಸಿ ಹೋಳಿಗೆ ಊಟ ಮಾಡಿಕೊಂಡು ಹೋಗಿ. ಬ್ಯಾಚುಲರ್ ಆಗಿ ಉಳಿಯುವ ಗಂಡಿಗೆ ಬೆಲೆಯಿಲ್ಲ. ನಿಮ್ಮೆಲ್ಲರ ಹಾರೈಕೆಯೊಂದಿಗೆ ನಾನು ಬಿತ್ತಬೇಕಾಗಿರೋದು ಪ್ರೀತಿಯ ತೋಟ ಎಂದು ಡೈಲಾಗ್ ಹೊಡೆಯುತ್ತಾ ಭಾವಿ ಪತ್ನಿಗೆ ಕಿಸ್ ಮಾಡಿದ್ದಾರೆ ಡಾಲಿ.
View this post on Instagram
ಇನ್ನೂ ಇದೇ ಫೆ.15 ಹಾಗೂ ಫೆ.16ರಂದು ಡಾಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ವಸ್ತುಪ್ರದರ್ಶನ ಮೈದಾನ, ಅಂಬಾವಿಲಾಸ ಅರಮನೆ ಮುಂಭಾಗ ಮೈಸೂರಿನಲ್ಲಿ ಮದುವೆ ಜರುಗಲಿದೆ. ಈ ಸಂಭ್ರಮದಲ್ಲಿ ಸಿನಿಮಾ ರಂಗದ ಸ್ಟಾರ್ಸ್ ಹಾಗೂ ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.