ಮಂಗಳೂರು: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ (Dharmasthala) ಹುಟ್ಟಿ ಬಹಳ ಪುಣ್ಯ ಮಾಡಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (D.Veerendra Heggade) ಅವರು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಎಷ್ಟೋ ದೂರದವರು ಬಂದರೂ ಹತ್ತಿರದವರು ಯಾಕೆ ಬರ್ತಿಲ್ಲ ಎಂಬ ಮಾತಿತ್ತು. ಇವತ್ತು ನಮ್ಮವವರೆಲ್ಲಾ ಇಲ್ಲಿಗೆ ಬಂದಿದ್ದೀರಾ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಈದ್ ಮಿಲಾದ್ ಬಗ್ಗೆ ಮಾತ್ರ ಯಾಕೆ ಮಕ್ಕಳು ಅಧ್ಯಯನ ಮಾಡಬೇಕು – ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ
ನಾವು ಈ ಕುಟುಂಬದಲ್ಲಿ ಹುಟ್ಟಿ ಅದೃಷ್ಟವಂತರಾಗಿದ್ದೇವೆ, ಧರ್ಮಸ್ಥಳದಲ್ಲಿ ಹುಟ್ಟಿ ಪುಣ್ಯ ಮಾಡಿದ್ದೇವೆ. ನಮ್ಮ ಇಡೀ ಕುಟುಂಬ ಇಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ. ಈ ಕಾರಣದಿಂದ ನಿಮಗೆ ನಮ್ಮ ಮೇಲೆ ಪ್ರೀತಿ ಅಭಿವ್ಯಕ್ತವಾಯಿತು. ಇಷ್ಟು ದಿನ ಪ್ರೀತಿ ಇದ್ದರೂ ಅಭಿವ್ಯಕ್ತಪಡಿಸಲು ಅವಕಾಶ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ
ಎಸ್‌ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರ್ತಾ ಇದೆ. ಆ ಎಲ್ಲಾ ತನಿಖೆಯ ವಿಷಯಗಳು ನಮಗೆ ಪೂರಕವಾಗಿರಲಿ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದು ನುಡಿದಿದ್ದಾರೆ.