ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರೋ ಶಶಿಕಲಾ ನಟರಾಜನ್ ಕುರಿತು ಸ್ಫೋಟಕ ಮಾಹಿತಿ ಬಂದಿದೆ.
ಬೆಂಗಳೂರಿನ ಪರಪ್ಪನ ಅಗ್ರಾಹಾರ ಜೈಲು ಸೇರಿರೋ ಶಶಿಕಲಾ ಹಾಗೂ ಆಕೆಯ ಆಪ್ತೆ ಇಳವರಿಸಿ ಕೈದಿ ಬದಲು ಸಾಮಾನ್ಯ ಧಿರಿಸಿನಲ್ಲಿ ಓಡಾಟ ಮಾಡಿದ್ದಾರೆ. ಕಾರಾಗೃಹದ ಡಿಜಿಪಿಯಾಗಿದ್ದ ಡಿ.ರೂಪಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಿದ ಹೊಸ ವಿಡಿಯೋದಿಂದ ಈ ವಿಷಯ ತಿಳಿದುಬಂದಿದೆ.
ಜೈಲಿನ ಹಿರಿಯ ಅಧಿಕಾರಿಗಳ ಕೃಪಕಟಾಕ್ಷದಿಂದ ಶಶಿಕಲಾ ನಟರಾಜನ್ ಜೈಲಿನಿಂದಲೇ ಹೊರಗೆ ಹೋಗಿದ್ರಾ? ಎಂಬ ಪ್ರಶ್ನೆ ಮೂಡಿದೆ. ಮಹಿಳಾ ಕೈದಿಗಳ ಸಂಕೀರ್ಣದಲ್ಲಿ ಪುರುಷ ಗಾರ್ಡ್ಗಳಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲ. ಆದ್ರೂ ಕೂಡ ಪುರಷ ಗಾರ್ಡ್ಗಳು ಭದ್ರತೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
https://www.youtube.com/watch?v=VUvHqCfFg0E