– ಸಿಎಂ ಕುರ್ಚಿ ಬೇಕು ಅಂತ ಸಿದ್ದರಾಮಯ್ಯರನ್ನ ಎಳೆದು ಕೂರಿಸೋಕೆ ಆಗುತ್ತಾ?
ಬೆಂಗಳೂರು: ಅಣ್ಣ ಸಿಎಂ ಆಗಲಿ ಅನ್ನೋ ಆಸೆ ಈಗಲೂ ಇದೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ( D K Suresh) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ (D K Shivakumar) ಹೈಕಮಾಂಡ್ ಭೇಟಿ ಯಾವುದು ಹೊಸತಲ್ಲ. ನಿರಂತರವಾಗಿ ಭೇಟಿ ಮಾಡುತ್ತಲ್ಲೇ ಇರುತ್ತಾರೆ. ಹೈಕಮಾಂಡ್ ಮುಂದೆ ಡಿಮ್ಯಾಂಡ್ ಇಡಲು ಏನಿದೆ ಪಾರ್ಟಿ ಅವರನ್ನ ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂದಿದ್ದಾರೆ. ಇದನ್ನೂ ಓದಿ: ನಮ್ಮ ತೆರಿಗೆ ಹಣವನ್ನ ಉತ್ತರ ಭಾರತಕ್ಕೆ ಕೊಡ್ತಿದ್ದಾರೆ: ಸತೀಶ್ ಜಾರಕಿಹೊಳಿ
ಈಗ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇದ್ದಾರೆ, ಸ್ಥಾನ ಬೇಕು ಅಂತ ಎಂದು ಚೇರ್‌ನಿಂದ ಎಳೆದು ಕೂರಿಸೋಕೆ ಆಗುತ್ತಾ? ಪಕ್ಷದ ಅಧ್ಯಕ್ಷರು ದೆಹಲಿಗೆ ಹೋಗುತ್ತಾ ಇರುತ್ತಾರೆ. ಹೈಕಮಾಂಡ್ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಹೈಕಮಾಂಡ್ ಭೇಟಿ ಮಾಡಿ ಬರುವುದು ಪ್ರವೃತ್ತಿ. ಡಿಕೆಶಿ ಮುಂದೆ ಯಾವುದೇ ಅಜೆಂಡ ಇಲ್ಲ. ಬೇರೆ ಯಾವುದೇ ಚಿಂತನೆಗಳೂ ಇಲ್ಲ. ಹಕ್ಕು ಅನ್ನೋ ಪ್ರಶ್ನೆ ಇಲ್ಲ ಎಂದು ನುಡಿದ್ದಾರೆ.
ಡಿ.ಕೆ.ಶಿವಕುಮಾರ್ ಹಿಂದೆ ಪ್ರಧಾನಿ ಭೇಟಿ ಆಗುವುದು ಹೈಕಮಾಂಡ್ ಗಮನಕ್ಕೆ ತಂದಿದ್ದರು. ಶಿವರಾತ್ರಿ ಹಬ್ಬದಲ್ಲಿ ಅಮಿತ್ ಶಾ ಭೇಟಿಯೂ ಹೈಕಮಾಂಡ್ ಗಮನಕ್ಕೆ ತಂದಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಪಂಚದಾದ್ಯಂತ ಜನ ಭಾರತಕ್ಕೆ ಬರಲು ಇಚ್ಛಿಸುತ್ತಾರೆ, ತಿಳಿದುಕೊಳ್ಳಲು ಬಯಸುತ್ತಾರೆ – ಮೋದಿ
ಕೇಂದ್ರದ ತೆರಿಗೆ ಕಡಿತ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಷಯ ಅಲ್ಲಲ್ಲಿ ಚರ್ಚೆ ಆಗುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯಗಳಿಗೆ ಶಕ್ತಿ ತುಂಬುವುದು ಬಿಟ್ಟು ಬಲವಂತವಾದ ಕಾನೂನು ಹೇರಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯಗಳ ಅಭಿವೃದ್ಧಿ ಕುಂಠಿತಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಕಾರಣ ಆಗುತ್ತಿದೆ ನಾವು ನೋಡ್ತಾ ಇದ್ದೇವೆ. ರಾಷ್ಟ್ರ ಹಾಗೂ ರಾಜ್ಯದ ಜನರು ತಿರುಗಿ ಬೀಳಬಹುದು. ತೆರಿಗೆ ಹಣ ಕೊಡಿ ಎಂದು ನಾನು ಮನವಿ ಮಾಡ್ತೇನೆ. ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಣ ವಿಭಜನೆ ಆಗುತ್ತಿದೆ. ಮಹಿಳಾ ಮೀಸಲಾತಿ ಅನುಮೋದನೆ ಆಗಿದೆ. ಜಾತಿಗಣತಿ ಆಗುವ ಸಾಧ್ಯತೆ ಇದೆ. ಕ್ಷೇತ್ರಗಳನ್ನ ಜಾಸ್ತಿ ಮಾಡಿದರೆ, ಸಂಪೂರ್ಣವಾಗಿ ಉತ್ತರ ಭಾರತದ ಹಿಡಿತಕ್ಕೆ ಹೋಗುತ್ತದೆ. ಬಿಜೆಪಿ ನಾಯಕರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ ಎಥಿಕ್ಸ್ ಕಮಿಟಿಗೆ ರವಾನೆ: ಬಸವರಾಜ್ ಹೊರಟ್ಟಿ
ದೇಶ ಅಂದರೆ ಉತ್ತರ ಪ್ರದೇಶ ಹಾಗೂ ಗುಜರಾತ್ ಎರಡೇ ರಾಜ್ಯ ಅಲ್ಲ. ನಮಗೂ ಕೂಡ ಸಮಾನ ಅವಕಾಶ ಸಿಗಬೇಕು ಅದನ್ನ ಕಸಿದುಕೊಳ್ಳುತ್ತಿದ್ದಾರೆ. ರಾಜಕೀಯ ಒಂದು ಕಡೆ ಇಡಿ, ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಇಂಥ ಕಾನೂನು ಮಾಡಿ ನಮ್ಮನ್ನ ಸೆದೆಬಡಿಯುವುದು, ಎಲ್ಲವನ್ನೂ ಮ್ಯಾನೇಜ್ ಮಾಡುವ ಕಲೆ ಬಿಜೆಪಿಯದ್ದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೆಹಲಿ ಖಾಸಗಿ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ – ಕಾರಣ ಸಸ್ಪೆನ್ಸ್