ಬೆಂಗಳೂರು: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ, ಬಾಲಕಲಾವಿದೆ ಸಮನ್ವಿ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
Advertisement
ಕೆಂಗೇರಿ ರಸ್ತೆಯಲ್ಲಿರುವ ಅಮೃತಾ ರೂಪೇಶ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಮಂಗಳವಾರ ಭೇಟಿ ನೀಡಿದರು. ಸಮನ್ವಿ ಅಗಲಿಕೆ ದುಃಖದಲ್ಲಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಬಾಲಕಲಾವಿದೆ ಸಮನ್ವಿ ಭಾವಚಿತ್ರ ಗೌರವ ನಮನ ಸಲ್ಲಿಸಿದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
Advertisement
ಅರಳಿ ನಗಬೇಕಿದ್ದ ಹೂವೊಂದು ಮೊಗ್ಗಿನಲ್ಲೇ ದೇವರಿಗೆ ಅರ್ಪಣೆಯಾಗಿದೆ. ಖ್ಯಾತ ಹರಿಕಥಾ ವಿದ್ವಾಂಸ ಶ್ರೀ ಗುರುರಾಜ ನಾಯ್ಡು ಅವರ ಮೊಮ್ಮಗಳು ಸಮನ್ವಿ ಪ್ರತಿಭಾವಂತೆ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಭರವಸೆಹುಟ್ಟಿಸಿದ್ದಳು. ಆಕೆಯ ಅಗಲಿಕೆ ಕಲಾ ರಂಗಕ್ಕೆ ತುಂಬಲಾರದ ನಷ್ಟ. ಇಂದು ಸಮನ್ವಿ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಧೈರ್ಯ ಹೇಳಿದೆ. pic.twitter.com/MFJf6vdfFU
— DK Shivakumar (@DKShivakumar) January 18, 2022
Advertisement
Advertisement
6 ವರ್ಷದ ಪುಟ್ಟ ಬಾಲಕಿ ನಾಲ್ಕು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಳು. ಬೆಂಗಳೂರಿನ ಕೋಣನಕುಂಟೆಯಲ್ಲಿ ತಾಯಿ ಅಮೃತಾ ನಾಯ್ಡು ಮತ್ತು ಮಗಳು ಸಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ಟಿಪ್ಪರ್ ಡಿಕ್ಕಿ ಹೊಡದು ಸ್ಕೂಟಿಯಿಂದ ಇಬ್ಬರೂ ಬಿದ್ದರು. ಟಿಪ್ಪರ್ ಲಾರಿಯ ಮಡ್‌ಗಾರ್ಡ್ ಸಮನ್ವಿಗೆ ಗುದ್ದಿದೆ. ಹೀಗಾಗಿ ಹೊಟ್ಟೆ ಭಾಗದಲ್ಲಿ ರಕ್ತಸ್ರಾವ ಆಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಳು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ