– ಭರ್ತಿಯಾದ ಕೆಆರ್‌ಎಸ್ ಡ್ಯಾಂ ವೀಕ್ಷಿಸಿದ ಡಿಸಿಎಂ
ಮಂಡ್ಯ: ಅಬ್ಬರದ ಮಳೆಯಿಂದಾಗಿ ಭರ್ತಿಯಾಗಿರುವ ಕೆಆರ್‌ಎಸ್ ಜಲಾಶಯಕ್ಕೆ (KRS Dam) ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಭೇಟಿ ನೀಡಿ ವೀಕ್ಷಿಸಿದರು.
Advertisement
ಡ್ಯಾಂ ವೀಕ್ಷಣೆ ಮಾಡಿದ ಡಿಸಿಎಂ, ಜಲಾಶಯದ ನೀರಿನ ಮಟ್ಟ, ನೆರೆ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಡ್ಯಾಂ ವೀಕ್ಷಣೆ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: Karnataka Rain Alert: ಕೆಆರ್‌ಎಸ್ ಡ್ಯಾಂ ಭರ್ತಿಗೆ 4 ಅಡಿಯಷ್ಟೇ ಬಾಕಿ; ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರ – ಎಲ್ಲೆಲ್ಲಿ ಏನಾಗಿದೆ?
Advertisement
Advertisement
ಕೆಆರ್‌ಎಸ್ ಡ್ಯಾಂ ವೀಕ್ಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣನ ಕೃಪೆ, ತಾಯಿ ಚಾಮುಂಡೇಶ್ವರಿ ಅನುಗ್ರಹ. ಕಾವೇರಿ ನದಿಗೆ ನಾವೆಲ್ಲ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿ ಮೀರಿ ರೈತರನ್ನ ಕಾಪಾಡುವ ಕೆಲಸ ಮಾಡಿದ್ದೇವೆ. ಕಳೆದ ವರ್ಷ ಸಾಕಷ್ಟು ಬರಗಾಲ ಇತ್ತು. ಈಗ ಕಾವೇರಿ ತಾಯಿಯ ಕೃಪೆ ನಮಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
Advertisement
40 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಸದ್ಯ 20 ಟಿಎಂಸಿ ಬಿಡಿ ಎಂದು ಆದೇಶ ಆಗಿತ್ತು. ಆದರೆ ನಾವು ನಿರ್ಧಾರ ಮಾಡಿ ನೀರು ಬಿಡಲಿಲ್ಲ. ಕೆಲವರು ನೀರು ಬಿಟ್ಟಿದ್ದಾರೆ ಅಂತಾ ಹೇಳ್ತಾರೆ. ನಾವು ಯಾವುದೇ ನೀರು ಬಿಟ್ಟಿಲ್ಲ. ಅವರ ಆದೇಶ ಆದಮೇಲೆ ಅವರಿಗೆ ಡ್ಯಾಂ ತುಂಬಿ 30 ಟಿಎಂಸಿ ನೀರು ಹರಿದು ಹೋಗಿದೆ. ಇನ್ನು 10 ಟಿಎಂಸಿ ನೀರು ಹರಿದರೆ ಈ ವರ್ಷದ ಗಡುವು ತೀರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಳೆಯ ಆರ್ಭಟ – ಕೆಆರ್‌ಎಸ್‌ನಿಂದ ಯಾವುದೇ ಕ್ಷಣದಲ್ಲಾದರೂ ಕಾವೇರಿ ನದಿಗೆ ನೀರು
ಸದ್ಯ ಡ್ಯಾಂನಿಂದ 50 ಸಾವಿರ ಕ್ಯುಸೆಕ್ ನೀರು ಹೋಗ್ತಿದೆ. ವರುಣನ ಕೃಪೆಯಿಂದ ಆದೇಶ ಪಾಲನೆ ಮಾಡಿದ್ದೇವೆ. 1,455 ಕೆರೆಗಳು ಕಾವೇರಿ ಕೊಳ್ಳದಲ್ಲಿವೆ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.