ಮಂಡ್ಯ: ಕೈಯಲ್ಲಿ ಖಡ್ಗ ಹಿಡಿದು, ಪೇಟ ಧರಿಸಿ ಟಿಪ್ಪು ಸುಲ್ತಾನ್ ಅವತಾರದಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಗಲಾಟೆ ಮಾಡುತ್ತಿದ್ದ ಅಭಿಮಾನಿಗಳಿಗೆ ಕತ್ತಿ ತೋರಿಸಿ, ನಿಮ್ಮ ಕತ್ತನ್ನೇ ಹೊಡಿತೀನಿ ಎಂದು ಹೇಳಿ ವ್ಯಂಗ್ಯವಾಗಿ ಬಿಸಿ ಮುಟ್ಟಿಸಿದ್ದಾರೆ.
ಇಂದು ಮಂಡ್ಯದ ಶ್ರೀರಂಗಪಟ್ಟಣದ ಟಿಪ್ಪು ಮಡಿದ ಸ್ಥಳದಲ್ಲಿ ಡಿಕೆಶಿ ಅಭಿಮಾನಿಗಳತ್ತ ಖಡ್ಗ ಪ್ರದರ್ಶಿಸಿದ್ದಾರೆ. ಟಿಪ್ಪು ಮಡಿದ ಸ್ಥಳಕ್ಕೆ ಭೇಟಿ ಕೊಟ್ಟ ಡಿಕೆಶಿ ಅವರನ್ನು ಸ್ಥಳೀಯ ಮುಸ್ಲಿಂ ಮುಖಂಡರು ಪೇಟ, ಕತ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:ಡಿಕೆಶಿ ಜೊತೆ ಜಿಟಿಡಿ ಚಾಮುಂಡಿ ದರ್ಶನ- ದೇವೇಗೌಡ್ರನ್ನು ನೋಡ್ತಿದ್ದಂತೆ ಎಸ್ಕೇಪ್
Advertisement
Advertisement
ಈ ವೇಳೆ ಡಿಕೆಶಿ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳು ಗಲಾಟೆ ಮಾಡುತ್ತಿದ್ದರು. ಆಗ ಡಿಕೆಶಿ ಸುಮ್ಮನಿರಿ ಎಂದು ಮನವಿ ಮಾಡಿದರು. ಆದರೂ ಅವರ ಹಿಂದೆ ನಿಂತಿದ್ದ ಅಭಿಮಾನಿಗಳು ಡಿಕೆಶಿಯನ್ನು ನೋಡಲು ಗಲಾಟೆ ಮಾಡುತ್ತಿದ್ದರು. ಹೀಗಾಗಿ ‘ಏಯ್ ಸುಮ್ನಿರಿ, ಹಿಂಗೇ ಮಾತಾಡ್ತಿದ್ರೆ ನಿಮ್ಮ ಕತ್ತನ್ನೇ ಹೊಡಿತೀನಿ’ ಎಂದು ಕೈಯಲ್ಲಿದ್ದ ಖಡ್ಗ ತೋರಿಸಿ ತಮಾಷೆ ಮಾಡಿದರು.
Advertisement
Advertisement
ಈ ವೇಳೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸುರೇಶ್‍ಗೌಡ ಜೊತೆ ಕೂಡ ಡಿಕೆಶಿ ಜೊತೆಗಿದ್ದರು. ಸ್ಥಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ನಾವು ಮತ್ತು ಜೆಡಿಎಸ್ ಅವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಜೆಡಿಎಸ್ ಮತ್ತು ನಮ್ಮ ಪ್ರೀತಿ ವೈಯಕ್ತಿಕ ವಿಚಾರ. ಪಕ್ಷದ ಸಿದ್ದಾಂತಗಳನ್ನು ಇಬ್ಬರೂ ಒಪ್ಪಿಕೊಳ್ಳುತ್ತೇವೆ. ಜಾತ್ಯಾತೀತ ತತ್ವದ ಬಗ್ಗೆ ಒಪ್ಪಿಕೊಳ್ಳುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡಬೇಕಿದೆ. ರಾಜಕೀಯವಾಗಿ ನಮ್ಮ ಇಬ್ಬರ ಪಕ್ಷದಲ್ಲಿ ಬೇಕಾದಷ್ಟು ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಕಾರ್ಯಕರ್ತರು ಪ್ರೀತಿ ಮಾಡವಾಗ ನಾವು ಇಲ್ಲ ಎಂದು ಹೇಳಲು ಆಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋಗುವ ಕೆಲಸ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ:ಡಿಕೆಶಿ ಜೊತೆ ಸಿದ್ದರಾಮಯ್ಯ ಸಂಧಾನ-‘ಟಗರು’ ರಾಜಿ ಆಫರ್ಗೆ ‘ಬಂಡೆ’ ಉತ್ತರ
ಹಾಗೆಯೇ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೂ ಡಿಕೆಶಿ ಭೇಟಿ ಕೊಟ್ಟು, ವಿಶೇಷ ಪೂಜೆ ಮಾಡಿಸಿದರು. ಈ ಸಂದರ್ಭದಲ್ಲಿ ಮಳೆಯ ನಡುವೆಯೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಿ ಪ್ರೀತಿ ಮೆರೆದರು.