ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) 6 ವರ್ಷ ಪೂರೈಸಿದ್ದಾರೆ. ಈ ಸಂಭ್ರಮಾಚರಣೆಗಾಗಿ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ.
ಇಂದಿನ ಔತಣಕೂಟ ಜೊತೆ ಮಹತ್ವದ ಘೋಷಣೆ ಅಥವಾ ಸ್ಪಷ್ಟ ಸಂದೇಶ ರವಾನೆಗೆ ಡಿಕೆಶಿ ಮುಂದಾಗುವ ಸಾಧ್ಯತೆ ಇದೆ. ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗೊಂದಲದ ನಡುವೆ ಡಿಸಿಎಂ ಡಿನ್ನರ್ ಕೂಟ ಸಾಕಷ್ಟು ಕುತೂಹಲ ಮೂಡಿಸಿದೆ. ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷರ 6 ವರ್ಷದ ಪೂರೈಕೆ ಜೊತೆ ಜೊತೆಗೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಇದನ್ನೂ ಓದಿ: ಜಮೀರ್ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್ ವಾರ್ನಿಂಗ್
ಕೆಲವು ದಿನದ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಬಗ್ಗೆಯೂ ಡಿಕೆಶಿ ಮಾತನಾಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಡಿಸಿಎಂ ಡಿಕೆಶಿ ಔತಣ ಕೂಟದ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಿದೆ. ಡಿಸಿಎಂ ಡಿಕೆಶಿ ಇಂದಿನ ಡಿನ್ನರ್ ಮೀಟಿಂಗ್ ಜೊತೆ ಮಹತ್ವದ ಘೋಷಣೆ ಏನಾದರೂ ಮಾಡ್ತಾರಾ ಎಂಬ ಕುತೂಹಲವೂ ಹೆಚ್ಚಿದೆ.
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ. ಮತ್ತೊಂದು ದಿನ ನಮ್ಮ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಭೋಜನಕೂಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಡಿಕೆಶಿ ಪರವಾಗಿ ನಾವಿದ್ದೇವೆ, ದೆಹಲಿಯಿಂದ ನಾಳೆನೇ ಬರಲಿ ತೊಂದ್ರೆ ಇಲ್ಲ: ಸತೀಶ್ ಜಾರಕಿಹೊಳಿ

