ಕಲಬುರಗಿ: ಚುನಾವಣೆವರೆಗೆ ಸುಮ್ಮನಿದ್ದರು. ಆದರೆ ಇದೀಗ ಪೆಟ್ರೋಲ್ ಮತ್ತು ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಮತದಾರರು ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಪಕ್ಷದ ನಿಲುವಿನ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆವರೆಗೆ ಸುಮ್ಮನಿದ್ದರು. ಆದರೆ ಇದೀಗ ಪೆಟ್ರೋಲ್ ಮತ್ತು ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಮತದಾರರು ತಾಳ್ಮೆ ಕಳೆದುಕೊಂಡಿದ್ದಾರೆ. ಜನರ ಆಧಾಯ ಹೆಚ್ಚು ಆಗಿಲ್ಲಾ, ಬೆಲೆ ಏರಿಕೆ ಮಾತ್ರ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ವಿರೋಧಿಸಿ, ಪಿಕ್ ಪಾಕೇಟರ್ಸ್ ವಿರುದ್ಧ ಹೋರಾಟ ಮಾಡುತ್ತೇವೆ. ಸಿಎಂ ಅವರು ಬೆಲೆ ಏರಿಕೆ ಮಾಡಬಾರದು. ಡಬಲ್ ಇಂಜಿನ್ ಸರ್ಕಾರ ಅಂತ ಹೇಳುತ್ತಿರ. ಇದೀಗ ಸರ್ಕಾರವೇ ಬೆಲೆ ಏರಿಕೆಯ ವೆಚ್ಚ ಭರಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ
Advertisement
Advertisement
ಗಾಂಧಿ ಕುಟುಂಬ ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿದ್ದಾರೆ. ನಾವೆಲ್ಲಾ ಹೋಗಿ ಸೋನಿಯಾಗಾಂಧಿ ಅವರಲ್ಲಿ ಬೆಗ್ ಮಾಡಿದ್ದವು. ನಾಯಕತ್ವವನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇವು. ನೋ ಕಾಂಗ್ರೆಸ್ ವಿತ್‍ಔಟ್ ಗಾಂಧಿ ಪ್ಯಾಮಿಲಿ ಎಂದಿದ್ದಾರೆ. ಇದನ್ನೂ ಓದಿ: ಬ್ರೋಕರ್ ಮೋಹನ್ ಮನೆಯಲ್ಲಿತ್ತು 5 ಕೆಜಿ ಚಿನ್ನ – ಎಸಿಬಿ ಅಧಿಕಾರಿಗಳೇ ಶಾಕ್
Advertisement
Advertisement
ಬೆಂಗಳೂರಿನಲ್ಲಿ ಬಿಡಿಎ ಬ್ರೋಕರ್ ಮನೆ ಮೇಲೆ ಎಸಿಬಿ ದಾಳಿ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಉತ್ತುಂಗದಲ್ಲಿದೆ. ಕೊಳವೆ ಬಾವಿ ಕೊರೆಸಲು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರದ ಅವಾರ್ಡ್ ಇದ್ದರೆ ಕರ್ನಾಟಕಕ್ಕೆ ನೀಡಬೇಕು. ಎಲ್ಲರು ಸೇರಿಕೊಂಡು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.