ಕಲಬುರಗಿ: ಅವನ್ಯಾರೋ ಎಂಪಿ ಪಂಚರ್ ಹಾಕೋರು ನೀವು, ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಅಂತಿದ್ದ, ಪಂಚರ್ ಹಾಕಲಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನರಿಗೆ ಹೊಟ್ಟೆತುಂಬುವ ಯಾವುದೇ ಕೆಲಸ ಮಾಡುವುದಿಲ್ಲ. ಬರೀ ಭಾವನಾತ್ಮಕ ರಾಜಕಾರಣವನ್ನು ತರುತ್ತಾರೆ. ಅದನ್ನು ಬಿಟ್ಟು ಜನರಿಗೆ ಉದ್ಯೋಗ ಕೊಡಲಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಯಾರೂ ತೊಂದರೆ ಕೊಡಬಾರದು. ಒಂದೊಂದು ಧರ್ಮ ಸಹ ಹಿಂದಿನಿಂದ ಒಂದೊಂದು ಕಸುಬನ್ನು ಮಾಡಿಕೊಂಡು ಬಂದಿದೆ. ಹಾಗಾಗಿ ಎಲ್ಲರಿಗೂ ಎಲ್ಲ ಕಡೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ದೇವಸ್ಥಾನಗಳಲ್ಲಿ ಅಂತಹದ್ದೇನಿದೆ? ಹಾಗಾದರೆ ಚರ್ಚ್, ಮಸೀದಿ ಮುಂದೆ ಹಿಂದೂಗಳಿಗೆ ಅವಕಾಶ ನೀಡಬಾರದೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ
ಹಿಜಬ್ ಅನ್ನು ಪ್ರಶ್ನಿಸುತ್ತಿರುವುದು ವಿದ್ಯಾರ್ಥಿಗಳು ಸರ್ಕಾರಕ್ಕೂ ಅವರಿಗೂ ಒಂದೆಯೇ? ಸರ್ಕಾರ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.