ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಆಗುತ್ತಿದೆ. ಗ್ಯಾಸ್, ಆಟೋ ಗ್ಯಾಸ್ ದರ ಸಹಾ ಹೆಚ್ಚಳವಾಗುತ್ತಿರುವುದರ ವಿರುದ್ಧ ಕಾಂಗ್ರೆಸ್ ಹೋರಾಟ ರೂಪಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಸಂಬಂಧ ಸೆಪ್ಟಂಬರ್ 5 ಹಾಗೂ 6 ರಂದು ಪಕ್ಷದ ಮುಖಂಡರ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಸದನದಲ್ಲೂ ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ
Advertisement
Advertisement
ಚಾಮರಾಜನಗರದಲ್ಲಿ ನೋ ವ್ಯಾಕ್ಸಿನ್ ನೋ ರೇಷನ್, ನೋ ಪೆನ್ಷನ್ ಎನ್ನುವುದಕ್ಕೆ ಅವರೇನು ಚಕ್ರವರ್ತಿನಾ? ಲಸಿಕೆ ತಗೆದುಕೊಳ್ಳದಿದ್ದರೆ ರೇಷನ್ ಕೊಡಲ್ಲ ಎಂದರೆ ಹೇಗೆ? ಕೂಡಲೆ ಆ ಜಿಲ್ಲಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಬೇಕಾದರೆ ಅವನನ್ನ ಬಿಜೆಪಿ ಪಾರ್ಟಿ ವಕ್ತಾರ ಮಾಡಿಕೊಳ್ಳಲಿ. ನನಗೆ ಗೊತ್ತು ಅವನ ಪ್ಲಾನ್ ಏನು ಅಂತ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದರೋಡೆ ಮಾಡಿ ಮನೆ ಮಾಲೀಕರಿಗೆ ಖರ್ಚಿಗೆ ಹಣ ಕೊಟ್ಟ ಕಳ್ಳರು
Advertisement
Advertisement
ಮೈಸೂರಿನಲ್ಲಿ ವೈಸ್ ಚಾನ್ಸಲರ್ 6 ಗಂಟೆ ಮೇಲೆ ಓಡಾಡಬೇಡಿ ಅಂತಾರೆ. ಸರ್ಕಾರ ಆ ವೈಸ್ ಚಾನ್ಸಲರ್ ಸಸ್ಪೆಂಡ್ ಮಾಡಬೇಕು. ಮರ್ಡರ್ ಮಾಡಿ ತಪ್ಪಾಯ್ತು ಅಂದರೆ, ಕ್ಷಮಿಸಬೇಕಾ..? ಉಪಕುಲಪತಿ ಆದೇಶ ಮಾಡಿ ವಾಪಾಸ್ ಪಡೆದ ಬಗ್ಗೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.