ಬೆಂಗಳೂರು: ರಾಹುಲ್ ಗಾಂಧಿ ಹುಚ್ಚ ಎಂದ ಯತ್ನಾಳ್‍ಗೆ, ಒಬ್ಬ ಹುಚ್ಚ ಪ್ರಚಾರದಲ್ಲಿ ಇರೋಕೆ ಏನು ಬೇಕಾದರು ಮಾತನಾಡುತ್ತಾನೆ. ಅವನೊಬ್ಬ ಹುಚ್ಚ. ಕೋವಿಡ್ ವೈಫಲ್ಯ ಬೆಲೆ ಏರಿಕೆಯನ್ನೆಲ್ಲ ಡೈವರ್ಟ್ ಮಾಡೋಕೆ ಇಂತದೆಲ್ಲಾ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
Advertisement
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅಘ್ಘಾನ್ ವಿಧ್ಯಾರ್ಥಿಗಳು ನನ್ನ ಭೇಟಿಗೆ ಬಂದಿದ್ದರು. ನಮ್ಮ ರಾಜ್ಯದಲ್ಲಿ ಎಲ್ಲ ತರಹದ ರಕ್ಷಣೆ ಕೊಡಬೇಕಾಗುತ್ತದೆ ಎಂದಿದ್ದೇನೆ. ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ವಿದೇಶಿ ವಿದ್ಯಾರ್ಥಿಗಳು ಓದುತ್ತಾರೆ. ಮಕ್ಕಳು ಎಲ್ಲರೂ ನಮ್ಮ ಮಕ್ಕಳೇ. ಧರ್ಮ ಯಾವುದೇ ಆದರೂ ನಮ್ಮ ಮಕ್ಕಳು ಅವರು. ಇಂತಹ ಸಂದರ್ಭದಲ್ಲಿ ಮಾನವೀಯತೆ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನಮ್ಮಲ್ಲೂ ಅಯೋಗ್ಯ ಸ್ವಾಮೀಜಿಗಳು ಇದ್ದಾರೆ- ಯತ್ನಾಳ್ ಕಿಡಿ
Advertisement
Advertisement
ವಿನಯ್ ಕುಲಕರ್ಣಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ವಿನಯ್ ಕುಲಕರ್ಣಿ ಸೋತಿರಬಹುದು. ಕೇಸ್ ಯಾವ ಹಂತದಲ್ಲಿ ಇದೆ ಎಂದು ಗೊತ್ತಿದೆ. ಎಲೆಕ್ಷನ್ ಟೈಮ್ ನಲ್ಲಿ ಯಾವ ಲೀಡರ್ಸ್ ಬಂದು ಏನು ಮಾತನಾಡಿದ್ದಾರೆ, ಭಾಷಣ ಮಾಡಿದ್ದಾರೆ ಎಂದು ನೆನಪಿಸಿಕೊಳ್ಳಿ. ರಾಜಕೀಯವಾಗಿ ಅವರಿಗೆ ಬಹಳಷ್ಟು ನೋವು ಆಗಿದೆ. ಅವರಿಗೆ ಆದ ನೋವು ಹಂಚಿಕೊಂಡಿದ್ದಾರೆ. ಜೈಲಿನಲ್ಲಿ ಆಗಿರುವ ನೋವು, ಹೊರಗಡೆ ಆಗಿರುವ ನೋವು ಎಲ್ಲವನ್ನು ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇವೆ. ಕುಲಕರ್ಣಿ ಅವರ ಪರವಾಗಿ ಕಾಂಗ್ರೆಸ್ ಇರುತ್ತದೆ. ಅವರು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡುಗುತ್ತಾರೆ. ನಮಗೆ ನಂಬಿಕೆ ಇದೆ, ಅವರು ತಪ್ಪು ಮಾಡಿಲ್ಲ ಎನ್ನುವ ಅರಿವು ಅವರಿಗಿದೆ. ಕಾನೂನಿನ ಮೇಲೆ ನಂಬಿಕೆಯಿದೆ ಎಂದರು. ಇದನ್ನೂ ಓದಿ: ನಾಡಗೀತೆ ಸೀಮಿತ- ಭುವನೇಶ್ವರಿ ಭಾವಚಿತ್ರಕ್ಕೊಂದೇ ಸ್ವರೂಪ: ಸುನೀಲ್ ಕುಮಾರ್
Advertisement