ನಿನ್ನೆಯಷ್ಟೇ ನಡೆದ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುಸಜ್ಜಿತ ವೇದಿಕೆಯಲ್ಲಿ ಆ ಕಾರ್ಯಕ್ರಮ ನಡೆಯಲಿಲ್ಲವಲ್ಲ ಎಂದು ಸರಕಾರಕ್ಕೆ ವ್ಯಂಗ್ಯವಾಡಿದ್ದಾರೆ. ‘ನಿನ್ನೆ ಯಾಕೆ ಸ್ಟೇಜ್ ಹಾಗಾಯ್ತು, ಸ್ಟೇಜ್ ಕಥೆ ಏನಾಯ್ತು ಎಂದು ಪ್ರಶ್ನೆ ಮಾಡಿರುವ ಅವರು, ಸ್ಟೇಜ್ ಆರ್ಗನೈಸೆಷನ್ ಬಗ್ಗೆ ಕಿಡಿಕಾರಿದ್ದಾರೆ.
Advertisement
‘ವೆರಿ ಸಾರಿ ಫಾರ್ ಸ್ಟೇಜ್ ಆರ್ಗನೈಸೆಷನ್. ನಿನ್ನೆ ಆದ ಅವ್ಯವಸ್ಥೆ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ, ಬಳಿಕ ನಾವು ಮಾತಾಡ್ತೇವೆ’ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಕರ್ನಾಟಕ ರತ್ನ ರಾಜಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಕಾಲದಲ್ಲಿ ನಾನೂ ಇದ್ದೆ. ಎಂತಹ ಕಾರ್ಯಕ್ರಮ ಅದ’ ಎಂದು ಡಾ.ರಾಜ್ ಕುಮಾರ್ ಅವರಿಗೆ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಡಿ.ಕೆ. ಶಿವಕುಮಾರ್ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್ ರಾಜಣ್ಣ
Advertisement
Advertisement
ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ನಿನ್ನೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರವನ್ನು ಕರ್ನಾಟಕ ಸರಕಾರ ಬೆಂಗಳೂರಿನ ವಿಧಾನ ಸೌಧದ ಮುಂದೆ ಆಯೋಜಿಸಲಾಗಿತ್ತು. ಮಳೆಯ ಕಾರಣದಿಂದಾಗಿ ತರಾತುರಿಯಲ್ಲೇ ಕಾರ್ಯಕ್ರಮವನ್ನು ಮುಗಿಸಲಾಯಿತು. ಈ ಭಾವನಾತ್ಮಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪ್ಪು ಅಭಿಮಾನಿಗಳು ಆಗಮಿಸಿದ್ದರು. ಆದರೆ, ಅವರು ಮಳೆಯಲ್ಲಿ ನೆನೆಯುವಂತಾಯಿತು. ಪುನೀತ್ ಕುಟುಂಬಕ್ಕೆ ಮತ್ತು ಗಣ್ಯರು ಕುಳಿತುಕೊಳ್ಳುವ ಜಾಗದಲ್ಲೂ ಸರಿಯಾದ ವ್ಯವಸ್ಥೆ ಇರಲಿಲ್ಲ. ಹಾಗಾಗಿ ತರಾತುರಿಯಲ್ಲೇ ಕಾರ್ಯಕ್ರಮ ಮುಗಿಸಬೇಕಾಗಿ ಬಂತು.