ಬೆಂಗಳೂರು: ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರವು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಜೊತೆಗೆ ರಾಜಕೀಯವಾಗಿ ಕೆಲ ವಿಷಯಗಳನ್ನು ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಮಾಡಿದ ಸಂವಿಧಾನಕ್ಕೆ ಈ ತೀರ್ಮಾನ ಅನ್ವಯಿಸುವುದಿಲ್ಲ. ಅಂಬೇಡ್ಕರ್ ಅವರು ನಂತರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು ಎಂದರು.
Advertisement
Advertisement
ಬೇರೆ ಬೇರೆಯವರು ಬಂದು ಹರೇ ರಾಮ ಹರೇ ಕೃಷ್ಣಾ ಎಂದು ನಮ್ಮ ರಾಜ್ಯದಲ್ಲಿ ಭಜನೆ ಮಾಡುತ್ತಾರೆ. ಇದೊಂದು ಸೆಕ್ಯೂಲರ್ ರಾಜ್ಯವಾಗಿದೆ. ಶಾಂತಿಯ ನೆಲವೀಡಾದ ಕರ್ನಾಟಕದ ಬಗ್ಗೆ ಅಪಾರವಾದ ಪ್ರೀತಿ ಇದೆ. ಕರ್ನಾಟಕದಲ್ಲಿ ಶಾಂತಿ ಕೆಡೆಸಲು ಇದೊಂದು ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
Advertisement
Advertisement
ಇಂದು ಎಲ್ಲರಿಗೂ ಸೆಂಟ್ ಜೋಸೆಫ್, ಸೆಂಟ್ ಮಾರ್ಥಸ್‌ನಂತಹ ಕ್ರೈಸ್ತ ಶಾಲೆ ಬೇಕು. ನಾನು ನಮ್ಮ ಹಳ್ಳಿಯಲ್ಲಿ ಕ್ರೈಸ್ತ್ ಸ್ಕೂಲ್ ನಲ್ಲಿ ಓದಿದೆ. ನನಗೆ ಅಲ್ಲಿ ಯಾವತ್ತೂ ಅವರ ಧರ್ಮದ ಬಗ್ಗೆ ಭೋದಿಸಿಲ್ಲ. ಎಲ್ಲಾದರೂ ಅವರು ಬಲವಂತ ಮಾಡಿರುವ ಉದಾಹರಣೆಯೂ ಇಲ್ಲ. ಸುಮ್ಮನೆ ಮಾನಸಿಕವಾಗಿ ಅವರಿಗೆ ಹಿಂಸೆ ಕೊಡುವ ಕೆಲಸ ಆಗುತ್ತಿದೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!
ಎಂಇಎಸ್ ಪುಂಡಾಟಿಕೆಯಲ್ಲಿ ಕಾಂಗ್ರೆಸ್ ಡಬಲ್ ಸ್ಟ್ಯಾಂಡ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅವರ್ಯಾರೋ ತಲೆ ಕೆಟ್ಟೋಗಿರುವವರು ಮಾಡುತ್ತಾರೆ. ಯಾರೋ ನಾಲ್ಕೈದು ಜನ ಮಾಡಿದ ತಕ್ಷಣ ಬಿಜೆಪಿಯವರು ಮಾಡಿದವರು ಅಂತಾ ಹೇಳೋಕೆ ಆಗಲ್ಲ. ಕುಮಾರಸ್ವಾಮಿ ಅವರು ಬಹಳ ಬುದ್ಧಿವಂತರಿದ್ದಾರೆ ಹಾಗೆಯೇ ಬಹಳ ಶಕ್ತಿವಂತರು. ಹೀಗಾಗಿ ಅವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ
ಸಿಟಿ ರವಿಗೂ ನನಗೂ ಸಂಬಂಧವಿಲ್ಲ. ಆದರೂ ನನ್ನ ಬಗ್ಗೆ ಮಾತನಾಡುತ್ತಾರೆ. ಸಿಟಿ ರವಿ ಅಲ್ಲ ಪಟಾಕಿ ರವಿ. ಪಟಾಕಿ ಹೊಡಿಯೋದಷ್ಟೇ ಅವರ ಕೆಲಸ ಎಂದರು.