ಬೆಂಗಳೂರು: ಬಿಜೆಪಿಯವರು ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸೋಕೆ ಹೊರಟ್ಟಿದ್ದರು. ಆ ಬಳಿಕ ಹೆದರಿ ಸುಮ್ಮನಾಗಿದ್ದಾರೆ. ಅದನ್ನು ಮುಟ್ಟಬೇಕಾಗಿತ್ತು, ತೋರಿಸ್ತಾ ಇದ್ವಿ ಕಾಂಗ್ರೆಸ್ ಶಕ್ತಿ ಏನು ಅಂತ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
Advertisement
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿಯವರು ಇಂದಿರಾ ಗಾಂಧಿಯನ್ನು ದುರ್ಗೆಗೆ ಹೋಲಿಸಿದ್ದರು. ಪೆನ್ಷನ್, ಸೈಟ್, ಮನೆ ಯೋಜನೆಗಳನ್ನು ಇಂದಿರಾ ಗಾಂಧಿ ಜಾರಿ ಮಾಡಿದ್ದರು. ಅಂಗನವಾಡಿ, ಬಿಸಿಯೂಟ, ಎಲ್ಲಾರಿಗೂ ಉತ್ತೇಜನ ಕೊಡೋ ಕಾರ್ಯಕ್ರಮ ಕೊಟ್ಟಿದ್ದಾರೆ. ಬಡತನ, ಜಾತಿ ವ್ಯವಸ್ಥೆ ಸರಿ ಮಾಡಬೇಕು ಎಂದಿದ್ದರು. ಸಾಮಾಜಿಕ ಬದ್ಧತೆ ಬಗ್ಗೆ ತಿಳಿಹೇಳುವ ಕೆಲಸ ಮಾಡಿದ್ದರು ಎಂದು ಇಂದಿರಾ ಗಾಂಧಿ ಅವರನ್ನು ಸ್ಮರಿಸಿಕೊಂಡರು. ಇದನ್ನೂ ಓದಿ: ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ: ಸಿದ್ದರಾಮಯ್ಯ
Advertisement
Advertisement
ಈಗ ಕಾಂಗ್ರೆಸ್ ಬಿಟ್ಟು ಹೋಗಿದ್ದಾರಲ್ಲ ಗಿರಾಕಿಗಳು. ಅವರೇ ಇಂದಿರಾ ಕ್ಯಾಂಟೀನ್ ಅಂತ ಹೆಸರಿಡಿ ಎಂದು ಅರ್ಜಿ ತಗೊಂಡು ಬಂದಿದ್ದರು ಎಂದು ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಡಿಕೆಶಿ, ಮೊನ್ನೆ ಚುನಾವಣೆಗೆ ಪ್ರಚಾರಕ್ಕೆ ಹೋದಾಗ ಎಲ್ಲಾ ಕಡೆ ಇವ್ರೇ ಇದ್ದರು. ಬಿಜೆಪಿಯವರು ಯಾರೂ ಇರಲಿಲ್ಲ ಎಲ್ಲಾ ಹಳದಿ ಶಾಲು ಹಾಕಿಕೊಂಡು ನಾವೆ ಅಂತ ಓಡಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ
Advertisement