ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಾಯಕತ್ವದ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿಜೆಪಿ ಟ್ವೀಟ್ ಮೂಲಕ ಈ ಇಬ್ಬರು ನಾಯಕರ ಕಾಲೆಳೆದಿದೆ.
ಟ್ವೀಟ್‌ನಲ್ಲೇನಿದೆ?
ಕೆಪಿಸಿಸಿ ಅಧ್ಯಕ್ಷರನ್ನೇ ಆಪ್ತ ಎನ್ನಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆಂದರೆ ಇವರ ನಡುವಿನ ಕಂದಕ ಎಷ್ಟು ಆಳವಿರಬಹುದು? ಸಿದ್ದರಾಮಯ್ಯನವರೇ, ಸಿದ್ದರಾಮೋತ್ಸವ ಸ್ವಾಗತ ಸಮಿತಿಯಲ್ಲಿ ಇರುವವರು ಮಾತ್ರ ಆಪ್ತರೇ? ಡಿಕೆಶಿ ನಿಮ್ಮ ಪ್ರತಿಸ್ಪರ್ಧಿಯೇ? ಇದನ್ನೂ ಓದಿ: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್
Advertisement
ಸಿದ್ದರಾಮಯ್ಯರನ್ನು ಮುಂದಿನ ಸಿಎಂ ಎಂದು ಘೋಷಿಸುವ ವೇದಿಕೆಯೇ ಸಿದ್ದರಾಮೋತ್ಸವ ಎಂದು ನಾವು ಆರಂಭದಲ್ಲೇ ಹೇಳಿದ್ದೆವು.
ಈಗ ನಾಡಿನ ಜನತೆಯಲ್ಲಿ ಹೀಗೊಂದು ಸಂಶಯ ಹರಿದಾಡುತ್ತಿದೆ.
srlopcm75@gmail.com ಅಂದರೆ,
sr = ಸಿದ್ದರಾಮಯ್ಯ
lop= ಪ್ರತಿಪಕ್ಷ ನಾಯಕ
cm = ಮುಖ್ಯಮಂತ್ರಿ
75= ಅಮೃತ ಮಹೋತ್ಸವ
ನಿಜವೇ ಇದು? #ಉತ್ತರಿಸಿಸಿದ್ದರಾಮಯ್ಯ pic.twitter.com/wf3dApVioW
— BJP Karnataka (@BJP4Karnataka) July 5, 2022
Advertisement
ಸಿದ್ದರಾಮಯ್ಯರನ್ನು ಮುಂದಿನ ಸಿಎಂ ಎಂದು ಘೋಷಿಸುವ ವೇದಿಕೆಯೇ ಸಿದ್ದರಾಮೋತ್ಸವ ಎಂದು ನಾವು ಆರಂಭದಲ್ಲೇ ಹೇಳಿದ್ದೆವು. ಈಗ ನಾಡಿನ ಜನತೆಯಲ್ಲಿ ಹೀಗೊಂದು ಸಂಶಯ ಹರಿದಾಡುತ್ತಿದೆ. srlopcm75@gmail.com ಅಂದರೆ,
sr = ಸಿದ್ದರಾಮಯ್ಯ
lop= ಪ್ರತಿಪಕ್ಷ ನಾಯಕ
cm = ಮುಖ್ಯಮಂತ್ರಿ
75= ಅಮೃತ ಮಹೋತ್ಸವ
ನಿಜವೇ ಇದು? #ಉತ್ತರಿಸಿಸಿದ್ದರಾಮಯ್ಯ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
Advertisement
Advertisement
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 75ನೇ ಜನ್ಮದಿನಾಚರಣೆ ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಹುಟ್ಟುಹಬ್ಬದಂದು ಸಿದ್ದರಾಮೋತ್ಸವ ಕಾರ್ಯಕ್ರಮದ ಮೂಲಕ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್ ಬೇಸರಗೊಂಡಿದ್ದಾರೆ. ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದು ಪರೋಕ್ಷವಾಗಿ ಸಿದ್ದರಾಮೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲೇ ಕರ್ನಾಟಕ ಮೋಸ್ಟ್ ಕರಪ್ಟ್ ಸ್ಟೇಟ್, ಸರ್ಕಾರ ಒಟ್ಟಾಗಿ ಉಪ್ಪಿನ ಅಂಗಡಿ ತೆರೆದಿದೆ: ಡಿಕೆಶಿ