– ಟಾಪ್ 10 ಸಿರಿವಂತರಲ್ಲಿ ಕರ್ನಾಟಕದ 4 ಶಾಸಕರಿಗೆ ಸ್ಥಾನ
ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ಶಾಸಕರ (Richest MLAs) ಸಾಲಿನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.
Advertisement
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಭಾರತದ ಶ್ರೀಮಂತ ಶಾಸಕರ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಅದರಲ್ಲಿ ಟಾಪ್ 10 ಶ್ರೀಮಂತ ಶಾಸಕರನ್ನು ಹೈಲೇಟ್ ಮಾಡಿದೆ. ಪಟ್ಟಿಯಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದು, ಭಾರತದ ಅತ್ಯಂತ ಶ್ರೀಮಂತ ಶಾಸಕರೆನಿಸಿದ್ದಾರೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ
Advertisement
Advertisement
ಈಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ. ಶಿವಕುಮಾರ್ ಭಾರೀ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಅವರು ಒಟ್ಟು ಆಸ್ತಿ 1,413 ಕೋಟಿ ರೂ. ಇದೆ ಎಂದು ವರದಿ ತಿಳಿಸಿದೆ.
Advertisement
ಟಾಪ್ 10 ಶ್ರೀಮಂತ ಶಾಸಕರು
ಡಿ.ಕೆ. ಶಿವಕುಮಾರ್ (1,413 ಕೋಟಿ ರೂ. ಆಸ್ತಿ – ಕರ್ನಾಟಕದ ಕನಕಪುರ ಕ್ಷೇತ್ರ), ಕೆ.ಹೆಚ್.ಪುಟ್ಟಸ್ವಾಮಿ ಗೌಡ (1,267 ಕೋಟಿ ರೂ. – ಕರ್ನಾಟಕದ ಗೌರಿಬಿದನೂರ್ ಕ್ಷೇತ್ರ), ಪ್ರಿಯಕೃಷ್ಣ (1,156 ಕೋಟಿ ರೂ. – ಕರ್ನಾಟಕದ ಗೋವಿಂದರಾಜನಗರ ಕ್ಷೇತ್ರ), ಎನ್.ಚಂದ್ರಬಾಬು ನಾಯ್ಡು (688 ಕೋಟಿ ರೂ. – ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರ), ಜಯಂತಿಭಾಯ್ ಸೋಮಭಾಯ್ ಪಟೇಲ್ (661 ಕೋಟಿ ರೂ. – ಗುಜರಾತ್‌ನ ಮನ್ಸಾ ಕ್ಷೇತ್ರ), ಬಿ.ಎಸ್.ಸುರೇಶ (648 ಕೋಟಿ ರೂ. – ಕರ್ನಾಟಕದ ಹೆಬ್ಬಾಳ್). ಇದನ್ನೂ ಓದಿ: ಜೈನಮುನಿಗಳ ಹತ್ಯೆ ಪ್ರಕರಣ – ಸ್ವಾಮೀಜಿ ಪರ್ಸನಲ್ ಡೈರಿ ಪತ್ತೆ
ವೈ.ಎಸ್. ಜಗನ್ ಮೋಹನ್ ರೆಡ್ಡಿ (510 ಕೋಟಿ ರೂ. – ಆಂಧ್ರಪ್ರದೇಶದ ಪುಲಿವೆಂದ್ಲ ಕ್ಷೇತ್ರ), ಪರಾಗ್ ಶಾ (500 ಕೋಟಿ ರೂ. – ಮಹಾರಾಷ್ಟ್ರದ ಘಟ್ಕೋಪರ್ ಪೂರ್ವ ಕ್ಷೇತ್ರ), ಟಿ.ಎಸ್. ಬಾಬು (500 ಕೋಟಿ ರೂ. – ಛತ್ತೀಸಗಢದ ಅಂಬಿಕಾಪುರ್ ಕ್ಷೇತ್ರ), ಮಂಗಳ್‌ಪ್ರಭಾತ್ ಲೋಧಾ (441 ಕೋಟಿ ರೂ. – ಮಹಾರಾಷ್ಟ್ರದ ಮಲಬಾರ್ ಹಿಲ್ ಕ್ಷೇತ್ರ).
ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರು
ನಿರ್ಮಲ್ ಕುಮಾರ್ ಧಾರಾ (1,700 ರೂ. ಆಸ್ತಿ – ಪಶ್ಚಿಮ ಬಂಗಾಳ), ಮಕರಂದ ಮುದುಳಿ (15,000 ರೂ. ಆಸ್ತಿ – ಒಡಿಶಾ), ನರಿಂದರ್ ಪಾಲ್ ಸಿಂಗ್ ಸವ್ನ (18,370 ರೂ. ಆಸ್ತಿ – ಪಂಜಾಬ್), ನರೀಂದರ್ ಕೌರ್ ಭಾರಜ್ (24,409 ರೂ. – ಪಂಜಾಬ್), ಮಂಗಲ್ ಕಾಳಿಂದಿ (30,000 ರೂ. – ಜಾರ್ಖಂಡ್), ಪುಂಡರೀಕಾಕ್ಷ್ಯ ಸಹಾ (30,423 ರೂ. – ಪಶ್ಚಿಮ ಬಂಗಾಳ), ರಾಮ್ ಕುಮಾರ್ ಯಾದವ್ (30,464 ರೂ. – ಛತ್ತೀಸಗಢ), ಅನಿಲ್ ಕುಮಾರ್ ಅನಿಲ್ ಪ್ರಧಾನ್ (30,496 ರೂ. – ಉತ್ತರ ಪ್ರದೇಶ), ರಾಮ್ ಡಂಗೋರೆ (50,749 ರೂ. – ಮಧ್ಯಪ್ರದೇಶ), ವಿನೋದ್ ಭಿವಾ ನಿಕೊಲೆ (51,082 ರೂ. – ಮಹಾರಾಷ್ಟ್ರ).
Web Stories