ಬೆಂಗಳೂರು: ಅವರು ದೊಡ್ಡ ಜನ, ದೊಡ್ಡವರು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ್ದಾರೆ.
ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಬುಧವಾರದಂದು ಜಾಮೀನಿನ ಮೇಲೆ ಹೊರಬಂದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಕಿಡಿಕಾರಿದ್ದರು.
Advertisement
Advertisement
ಈ ವಿಚಾರಕ್ಕೆ ವಿಧಾನಸೌದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳು ಜನಾರ್ದನ ರೆಡ್ಡಿಯ ಹೇಳಿಕೆಯ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ, ಅವರು ದೊಡ್ಡ ಜನ, ದೊಡ್ಡವರು, ದೊಡ್ಡ ಮಾತನ್ನ ಆಡುವವರು. ನಾನು ಚಿಕ್ಕವನು ಅದರ ಬಗ್ಗೆ ನಾನು ಮಾತಾಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಯಾರು ಏನ್ ಬೇಕಾದ್ರು ಮಾಡಿಕೊಳ್ಳಬಹುದು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ. ಅವರಿಗೆ ಆಲ್ ದಿ ಬೆಸ್ಟ್ ಎಂದು ಹೇಳಿ ರೆಡ್ಡಿಗೆ ಟಾಂಗ್ ಕೊಟ್ಟರು. ಇದನ್ನು ಓದಿ: ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್- ರಾಜ್ಯದಲ್ಲಿ ಕಾವೇರಿ ಪ್ರತಿಮೆ ಸ್ಥಾಪನೆ: ಏನಿದು ಯೋಜನೆ? ವೆಚ್ಚ ಎಷ್ಟು?
Advertisement
ಬೈ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿರುವ ನನಗೆ ನನ್ನದೇ ಆದ ಕೆಲಸಗಳು ಇವೆ. ನಾನು ಯಾರ ತಂಟೆಗೂ ಹೋಗ್ತಿಲ್ಲ. ನಾನು ಎಲ್ಲರ ಹತ್ತಿರ ಅಣ್ಣ ಅಕ್ಕಾ ಅಂತಾ ಮಾತಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಕಾವೇರಿ ಪ್ರತಿಮೆ ನಿರ್ಮಾಣದ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಕೆಆರ್‌ಎಸ್ ನಲ್ಲಿ ಪ್ರವಾಸೋದ್ಯಮಕ್ಕಾಗಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಸ್ಥಳಗಳ ಕುರಿತು ಒಂದು ಸ್ಟ್ರೀಟ್ ನಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಆರಂಭದಲ್ಲಿ ಕಾವೇರಿ ತಾಯಿ ಪ್ರತಿಮೆ ಮಾಡಲು ಯೋಜನೆ ತಯಾರಿಸಿದ್ದು, ಈ ಕುರಿತು ನಿರ್ಮಾಣದ ಯೋಜನೆಯನ್ನ ಅಂತಿಮವಾಗಿ ಕ್ಯಾಬಿನೆಟ್ ಮುಂದೆ ಪ್ರಸ್ತಾಪಿಸಲಾಗುವುದು ಎಂದು ವಿವರಿಸಿದರು.
ಪ್ರತಿಮೆ ನಿರ್ಮಾಣದ ಜಾಗದದ ಬಗ್ಗೆ ಮಾಹಿತಿ ನೀಡಿದ ಸಚಿವರು ಕೆಆರ್‌ಎಸ್ ಡ್ಯಾಮ್‍ನ ಹತ್ತಿರ ಮುನ್ನೂರು ಎಕರೆಯಷ್ಟು ಜಾಗವಿದೆ. ಈ ವಿಚಾರವಾಗಿ ನಾವು ಕೆಲವು ಸಲಹೆಗಳನ್ನ ನೀಡಿದ್ದೇವೆ ಎಂದು ಹೇಳಿದ್ದಾರೆ.
ಕಾವೇರಿ ಪ್ರತಿಮೆಯನ್ನ ವರ್ಣಿಸಿದ ಸಚಿವರು, ಕಾವೇರಿ ತಾಯಿಯ ಬೃಹತ್ ಪ್ರತಿಮೆಯ ಕೆಳಗೆ ನೀರು ಹರಿಯುತ್ತದೆ, ಈ ಮಧ್ಯೆ ಗಾಜಿನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಲಿಫ್ಟ್ ಇರುತ್ತದೆ. ಪ್ರತಿಮೆಯ ಮುಂದೆ ನಿಂತರೆ ಡ್ಯಾಂ ವಿಹಂಗಮ ನೋಟವನ್ನ ಕಾಣುಬಹುದು. ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ನೀಡುತ್ತೇನೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews