ಬೆಂಗಳೂರು: ಸಂಕ್ರಾಂತಿ ಬಳಿಕ ಮತ್ತೆ ಪವರ್ ಶೇರ್ ಸದ್ದು ಶುರು ಆಗಲಿದೆ. ನಾಯಕತ್ವ ಬದಲಾವಣೆ ಗೊಂದಲ ವಿಚಾರವಾಗಿ ಡಿಕೆಶಿ (D.K Shivakumar) ಒತ್ತಡ ತಂತ್ರ ಪ್ರಯೋಗಿಸಲು ಮುಂದಾಗಿದ್ದು, ರಾಹುಲ್ ಗಾಂಧಿ (Rahul Gandhi) ಭೇಟಿಗೆ ಸಮಯ ಕೇಳಿದ್ದಾರೆ. ಸಂಕ್ರಾತಿ ಮರುದಿನವೇ ದೆಹಲಿಗೆ ಹಾರಲಿರುವ ಡಿಕೆಶಿ, ರಾಹುಲ್ ಮುಂದೆ ಸಿಎಂ ಕ್ಲೈಮ್‌ಗೆ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಜ.16 ಹಾಗೂ 22 ರಂದು ದೆಹಲಿಗೆ ಟೂರ್ ಫಿಕ್ಸ್ ಮಾಡಿಕೊಂಡಿರುವ ಡಿಕೆಶಿ, ಒಂದು ದಿನ ರಾಹುಲ್ ಭೇಟಿಗೆ ಅವಕಾಶ ಕೇಳಿದ್ದಾರೆ. ಜನವರಿ 16 ರಂದು ಅಸ್ಸಾಂ ಚುನಾವಣೆ (Election) ಸಂಬಂಧಪಟ್ಟಂತೆ ವೀಕ್ಷಕರ ಸಭೆ ಇದೆ. ವೀಕ್ಷಕರ ಸಭೆ ಬಳಿಕ ರಾಹುಲ್ ಜೊತೆಗೆ ಪ್ರತ್ಯೇಕ ಚರ್ಚೆ ನಡೆಸಲು ಡಿ.ಕೆ ಶಿವಕುಮಾರ್ ಸಮಯ ಕೇಳಿದ್ದಾರೆ. ಇದನ್ನೂ ಓದಿ: ಸಿಎಂ ಎದುರೇ ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ – ಯತ್ನಾಳ್
ಜ.22 ರಂದು ಕೂಡ ದೆಹಲಿಗೆ ಭೇಟಿ ನೀಡಲಿರುವ ಡಿ.ಕೆ ಶಿವಕುಮಾರ್, ಆಗಲೂ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ನಾಯಕತ್ವ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆ ಇದ್ದು, ನಾಯಕತ್ವ ಗೊಂದಲ, ಸಂಪುಟ ಪುನರ್‌ರಚನೆ ವಿಚಾರ ಸೇರಿ ಎಲ್ಲದಕ್ಕೂ ತಿಂಗಳ ಅಂತ್ಯಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ಜನಸಂಪರ್ಕ ಸಭೆ ಬೇಕಾಬಿಟ್ಟಿ ಮಾಡ್ತಿದ್ದೀವಾ? – ನೀರಾವರಿ ಇಲಾಖೆ ಅಧಿಕಾರಿಗೆ ಯತೀಂದ್ರ ಕ್ಲಾಸ್

