ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ಸಾಯುವ ಮುನ್ನ ‘ಡಿ’ ಗ್ಯಾಂಗ್ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಕೊಲೆಯ ಬಳಿಕ ಹೆಂಗಾದ್ರೂ ಕೇಸ್ ಮುಚ್ಚಿ ಹೋಗುತ್ತೆ ಅನ್ನೋ ಗುಂಗಲ್ಲಿದ್ದ ಗ್ಯಾಂಗ್‍ನ ಒಂದೊಂದೇ ಕರಾಳ ಮುಖಗಳು ಈಗ ಅನಾವರಣ ಆಗುತ್ತಿದೆ.
ಒಂದು ಮೆಸೇಜ್ ಮಾಡಿದ್ದಕ್ಕೆ ಇಷ್ಟೊಂದು ಚಿತ್ರಹಿಂಸೆನಾ ಎಂಬ ಪ್ರಶ್ನೆಯೂ ಎದ್ದಿದೆ. ರೇಣುಕಾಸ್ವಾಮಿ ಕೊಲೆ ಹಿಂದಿನ ಕರಾಳ ಕೃತ್ಯ ಬಯಲಾಗಿದ್ದು, ಮತ್ತೊಂದು ‘ಡೆವಿಲ್’ ಎಕ್ಸ್ ಕ್ಲೂಸಿವ್ ಸುದ್ದಿ ಪಬ್ಲಿಕ್ ಟಿವಿಗೆ ದೊರೆತಿದೆ.
ಸಿನಿಶೈಲಿಯಲ್ಲೇ ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್ ಮರ್ಡರ್ ಮಾಡಿದೆ. ನಟ ದರ್ಶನ್ (Challenging Star Darshan) ಸಮ್ಮುಖದಲ್ಲೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎಂಬ ಸತ್ಯ ಇದೀಗ ಹೊರಬಿದ್ದಿದೆ. ಚಿತ್ರಹಿಂಸೆ ಸಾಕ್ಷಿಯೇ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯಲು ಕಾರಣ ಎನ್ನಲಾಗಿದೆ.
A5 ಆರೋಪಿ ನಂದೀಶ್ ಹಾಗೂ A13 ಆರೋಪಿ ದೀಪಕ್, ಸ್ವಾಮಿಗೆ ಮನ ಬಂದಂತೆ ಹಿಂಸೆ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರು ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಿರುವುದು ತನಿಖೆಯಲ್ಲಿ ಮಾತ್ರವಲ್ಲದೇ ಇದೀಗ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ..?: ರೇಣುಕಾಸ್ವಾಮಿ ಎರಡೂ ಭುಜದಲ್ಲಿ 5 ಕಡೆ ಸುಟ್ಟಿರೋ ಗುರುತುಗಳು ಇರೋದು ಪತ್ತೆಯಾಗಿದೆ. ಮನಬಂದಂತೆ ಥಳಿಸಿ, ಮಮಾರ್ಂಗಕ್ಕೆ ಕಾಲಿಂದ ಒದ್ದಿರುವುದು ಮಾತ್ರವಲ್ಲದೇ ಕರೆಂಟ್ ಶಾಕ್ ಕೊಟ್ಟಿರೋದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ. ಆಘಾತ ಮತ್ತು ರಕ್ತಸ್ರಾವದಿಂದ ರೇಣುಕಾಸ್ವಾಮಿ ಡೆತ್ ಆಗಿರೋದು ಬಯಲಾಗಿದೆ. ಇದನ್ನೂ ಓದಿ: ಚಿತ್ರಹಿಂಸೆ ನೀಡಿ ಕೊಲೆಗೈದು ಸ್ವಾಮಿ ಮೈಮೇಲಿದ್ದ ಚಿನ್ನಾಭರಣವನ್ನೂ ದೋಚಿದ್ದ ‘Devil’ ಗ್ಯಾಂಗ್!
ಕರೆಂಟ್ ಶಾಕ್ ಕೊಟ್ಟಿರೋದು ದೃಢ ಆಗಿರೋದ್ರಿಂದ ಕರೆಂಟ್ ಶಾಕ್ ಕೊಟ್ಟಿರೋ ಸಲಕರಣೆಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕರೆಂಟ್ ಶಾಕ್‍ಗೆ ಬಳಸಿದ್ದ ಎಲೆಕ್ಟ್ರಾನಿಕ್ ಮೆಗ್ಗಾರ್‍ಗಾಗಿ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಪಿ ದೀಪಕ್ ಮತ್ತು ನಂದೀಶ್ ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು ಕೃತ್ಯ ನಡೆಸಿದ ನಂತರ ಎಲ್ಲಿ ಬಿಸಾಡಿದ್ದಾರೆ ಅನ್ನೋ ಬಗ್ಗೆ ತನಿಖೆಗಿಳಿದಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಮೈಸೂರಿಗೆ ಹೋಗುವ ವೇಳೆ ಎಲೆಕ್ಟ್ರಾನಿಕ್ ಮೆಗ್ಗಾರ್ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.