ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಗ್ಯಾಸ್ ಸಿಲಿಂಡರ್ ಅಭಾವ (Gas Cylinder Emergency) ತೀವ್ರಗೊಂಡಿದೆ. ಬುದ್ಧಿಮಾಂದ್ಯ ಆಶ್ರಮ, ದೃಷ್ಟಿಹೀನ ಮಕ್ಕಳಾಶ್ರಮಕ್ಕೂ ಗ್ಯಾಸ್ ಟ್ರಬಲ್ ಆಗಿದೆ. ಆಶ್ರಮ, ಟ್ರಸ್ಟ್‌ಗಳಿಗೆ ಗ್ಯಾಸ್ ಪೂರೈಕೆ ಮಾಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಪತ್ರ ಬರೆಯುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್‌ನ ಅಭಾವ ಉಂಟಾದ ಪರಿಣಾಮ ಕಮರ್ಶಿಯಲ್ ಸಿಲಿಂಡರ್ ಖಾಲಿಯಾಗಿ ಹೋಟೆಲ್‌ಗಳು ಬಂದ್ ಆಗುತ್ತಿದೆ. ಇದರ ನಡುವೆ ದೃಷ್ಟಿಹೀನ, ಬುದ್ಧಿಮಾಂದ್ಯ ಮಕ್ಕಳಿರುವ ಟ್ರಸ್ಟ್‌ಗಳಲ್ಲಿಯೂ (Trusts) ಸಿಲಿಂಡರ್ ಸಿಗುತ್ತಿಲ್ಲ. ಇದರಿಂದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಶ್ವಿನಿ ಅಂಗಡಿ ಟ್ರಸ್ಟ್, ಸೃಷ್ಟಿ ಸ್ಪೆಷಲ್ ಅಕಾಡಮಿಯಿಂದ ಗ್ಯಾಸ್ ಏಜೆನ್ಸಿಗಳಿಗೆ ಪತ್ರ ಬರೆದಿದ್ದು, ಗ್ಯಾಸ್ ಪೂರೈಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶಬರಿಮಲೆ ವಿಚಾರದಲ್ಲಿ ಪಿಣರಾಯಿ ಯೂಟರ್ನ್ – ಮಹಿಳೆಯರ ಪ್ರವೇಶ ಹಿಂದಿನ ನಿಲುವು ಬದಲಾಯಿಸಿದ ಸರ್ಕಾರ
ಟ್ರಸ್ಟ್‌ಗಳಿಗೆ ಪ್ರತಿ ತಿಂಗಳು ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಪೂರೈಕೆ ಮಾಡುತ್ತಿದ್ದರು. ಆದರೆ ದಿಢೀರ್ ಬೆಳವಣಿಗೆಯಿಂದ ಇದೀಗ ಸಿಲಿಂಡರ್ ಸಿಗುತ್ತಿಲ್ಲ. ಟ್ರಸ್ಟ್‌ಗಳಿಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ಸಿಬ್ಬಂದಿ, ಏಜೆನ್ಸಿಗಳ ಬಳಿ ಬಂದು ಕೇಳಿದರೂ ಸಿಗುತ್ತಿಲ್ಲ. ಇದರಿಂದ ಟ್ರಸ್ಟ್‌ನಲ್ಲಿರುವ ಮಕ್ಕಳಿಗೆ ಊಟಕ್ಕೂ ಸಮಸ್ಯೆಯಾಗುತ್ತಿದೆ. ನಗರದ ಹಲವು ಟ್ರಸ್ಟ್‌ಗಳಲ್ಲಿ ಇದೇ ಸಮಸ್ಯೆಯಿದೆ. ಅನಿವಾರ್ಯವಾಗಿ ಸೌದೆಗಳ ಮೂಲಕ ಅಡುಗೆ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಇದನ್ನೂ ಓದಿ: ಯುಎಇ ಬಂದರು ಪ್ರದೇಶಗಳಿಂದ ಹೊರಗೆ ಹೋಗಿ: ಜನರಿಗೆ ಇರಾನ್ ಎಚ್ಚರಿಕೆ

