ಕಾರವಾರ: ಸಿಲಿಂಡರ್ ಸ್ಫೋಟಗೊಂಡು (Cylinder Blast) ಕಾರ್ಮಿಕರ ಕಾಲೋನಿ (Labor colony) ಮನೆಗಳಿಗೆ ಬೆಂಕಿ (Fire) ತಗುಲಿದ ಘಟನೆ ಕಾರವಾರದ (Karwar) ಮುದಗಾ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ನಡೆದಿದೆ.
Advertisement
ಸಿಲಿಂಡರ್ ಬಾಸ್ಟ್ ಆದ ಪರಿಣಾಮ ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪನಿ ಶೆಡ್‌ಗಳು ಹೊತ್ತಿ ಉರಿದಿವೆ. ಅಡುಗೆ ಸಿಲಿಂಡರ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಒಂದು ಸಾಲಿನ ನಾಲ್ಕೈದು ಶೆಡ್‌ಗಳಿಗೆ ಬೆಂಕಿ ವ್ಯಾಪಿಸಿದೆ. ಘಟನೆ ಹಿನ್ನೆಲೆ ಕಾರ್ಮಿಕರು ಶೆಡ್ ಬಿಟ್ಟು ಹೊರಗೆ ಓಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA
Advertisement
Advertisement
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ತಾಲೂಕಿನಲ್ಲಿರುವ ಈ ಕಾಲೋನಿಯಲ್ಲಿ ಸುಮಾರು 150ಕ್ಕೂ ಅಧಿಕ ಶೆಡ್‌ಗಳಿವೆ. ಘಟನೆಯ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್?-ನಾಳೆ ಅಧಿಕೃತ ಆದೇಶ ಸಾಧ್ಯತೆ
Advertisement