– ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳಿಗೆ ಹಾನಿ
ಆನೇಕಲ್: ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರವಾಗಿರುವ ಘಟನೆ ಬೊಮ್ಮಸಂದ್ರ (Bommasandra) ಸಮೀಪದ ಕಿತ್ತಗಾನ ಹಳ್ಳಿಯಲ್ಲಿ ನಡೆದಿದೆ.
ಗಾಯಾಳುಗಳನ್ನು ಕೇರಳ ಮೂಲದ ವಿಶ್ವ ಹಾಗೂ ತಮಿಳುನಾಡು ಮೂಲದ ಸುನಿಲ್ ಜಾದವ್ ಎಂದು ಗುರುತಿಸಲಾಗಿದ್ದು, ನಾರಾಯಣ ಹೃದಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ
ಇಂದು (ಜ.06 ) 8:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಜಯನಗರ ಮೂಲದ ಸುನಿಲ್ ಎಂಬುವವರಿಗೆ ಸೇರಿದ್ದ ಕಟ್ಟಡದಲ್ಲಿ ಇಬ್ಬರು ವಾಸವಾಗಿದ್ದರು. ಕೆಲಸಕ್ಕೆ ಹೋಗಲು ಒಬ್ಬರು ಸ್ನಾನ ಮಾಡುತ್ತಿದ್ದರಂತೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಇನ್ನೋರ್ವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ. ಸ್ಫೋಟದ ತೀವ್ರತೆಗೆ ಕಟ್ಟಡದ ಹಾಲೋ ಬ್ಲಾಕ್‌ಗಳು ಹಾರಿಹೋಗಿವೆ. ಬಿಲ್ಡಿಂಗ್ ನಾಲ್ಕು ಪಿಲ್ಲರ್‌ಗಳು ಕೂಡ ಛಿದ್ರಗೊಂಡಿವೆ. ಇದರ ಪರಿಣಾಮ ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳು ಹಾನಿಗೊಳಗಾಗಿವೆ.
ಸದ್ಯ ಗಾಯಾಳುಗಳನ್ನ ಸ್ಥಳೀಯ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ ಲೈಟ್ ಹಾಕಿದಾಗ ಸ್ಫೋಟ ಆಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, 15ಕ್ಕೂ ಹೆಚ್ಚು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: 2 ಬಡಾವಣೆ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಅಕ್ರಮ ಕಟ್ಟಡ ಕಟ್ಟಲು ಆರಂಭಿಸಿದ ಭೂ ಮಾಲೀಕರು