ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳದ (Maha Kumbh Mela) ಟೆಂಟ್ ಸಿಟಿಯಲ್ಲಿ ಎರಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ ಅವಗಢ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡ (Cylinder Blast) ಕೆಲವೇ ಕ್ಷಣದಲ್ಲಿ ಅಕ್ಕಪಕ್ಕದ ಡೇರೆಗಳಿಗೂ ಅಗ್ನಿ ಜ್ವಾಲೆ ವ್ಯಾಪಿಸಿದೆ.
Advertisement
ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ 2 ಸಿಲಿಂಡರ್ ಸ್ಫೋಟದಿಂದ ಅಗ್ನಿ ಅವಘಡ (Prayagraj Fire) ಸಂಭವಿಸಿದ್ದು, ಹಲವು ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಖಾರಾ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ
Advertisement
Advertisement
ಬೆಂಕಿಬಿದ್ದ ಟೆಂಟ್‌ನಲ್ಲಿದ್ದ ಜನರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಸಾವು ನೋವಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಮನುಭಾಕರ್ ಅಜ್ಜಿ, ಚಿಕ್ಕಪ್ಪ ಸಾವು
Advertisement
ಇನ್ನೂ ಮಹಾ ಕುಂಭದಲ್ಲಿ ಬೆಂಕಿ ನಂದಿಸುವ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆಡಳಿಯ ಮಂಡಳಿಯು ರಕ್ಷಣಾ ಕ್ರಮ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲಿದೆ. ಅಲ್ಲದೇ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಗಂಗಾ ದೇವಿಯನ್ನು ಪ್ರಾರ್ಥಿಸುತ್ತೇವೆ ಎಂಬುದಾಗಿ ಕುಂಭಮೇಳ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಫೆ.10, 11, 12ರಂದು ಟಿ.ನರಸೀಪುರದಲ್ಲಿ ಕುಂಭಮೇಳ: ಹೆಚ್‌ಸಿ ಮಹದೇವಪ್ಪ