ಗಾಂಧಿನಗರ: ಗುಜರಾತ್ (Gujarat) ರಾಜ್ಯದಲ್ಲಿ ಬಿಪರ್‌ಜಾಯ್ ಚಂಡಮಾರುತ ರಣಕೇಕೆ ಹಾಕುತ್ತಿದ್ದು, ಸ್ಥಳೀಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯ ಹಿನ್ನೆಲೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶಾಲೆಯೊಂದರ 127 ಜನರನ್ನು ರಾಷ್ಟ್ರೀಯ ವಿಪತ್ತು ಪಡೆ (NDRF) ಸ್ಥಳಾಂತರಿಸಿದೆ.
ಬಿಪರ್‌ಜಾಯ್ ಚಂಡಮಾರುತದ (Biparjoy Cyclone) ಪರಿಣಾಮದಿಂದಾಗಿ ಗುಜರಾತ್ ರಾಜ್ಯ ತತ್ತರಿಸಿ ಹೋಗಿದ್ದು, ಸುಮಾರು 74,000 ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಕರಾವಳಿಯ ಸಮೀಪವಿರುವ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ದೇವಭೂಮಿ ದ್ವಾರಕ ಜಿಲ್ಲೆಯ ರೂಪನ್ ಬಂದರ್ ಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಅಲ್ಲೂ ನೀರಿನ ಮಟ್ಟ ಏರಿಕೆಯಾಗಲು ಪ್ರಾರಂಭಿಸಿದಾಗ ಅಲ್ಲಿಂದ ಇನ್ನೊಂದು ಶಾಲೆಗೆ ಸ್ಥಳಾಂತರಿಸಲು (Evacuated) ನಿರ್ಧರಿಸಲಾಯಿತು. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್
Advertisement
Advertisement
ಮೊಣಕಾಲಿನವರೆಗೂ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಮಕ್ಕಳನ್ನು ಹಾಗೂ ಆ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ವೇಳೆ ನವಜಾತ ಶಿಶುವೊಂದನ್ನು ಮಳೆಯಿಂದ ಯಾವುದೇ ಹಾನಿಯಾಗದ ರೀತಿಯಲ್ಲಿ ಬಟ್ಟೆಯಲ್ಲಿ ಸುತ್ತಿ ಬಳಿಕ ಖಾಲಿ ಸಿಮೆಂಟ್ ಚೀಲದಲ್ಲಿ (Cement Bag) ಇಟ್ಟುಕೊಂಡು ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿ ಒಳ ನುಸುಳುತ್ತಿದ್ದ ಐವರು ವಿದೇಶಿ ಭಯೋತ್ಪಾದಕರ ಹತ್ಯೆ
Advertisement
ಶಿಶುವನ್ನು (Infant) ಸಿಮೆಂಟ್ ಚೀಲದಲ್ಲಿ ಹಾಕಿಕೊಂಡು ಸ್ಥಳಾಂತರಿಸುವ ವಿಡಿಯೋ ವೈರಲ್ ಆಗಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಮಗುವನ್ನು ಚೀಲದಲ್ಲಿ ಹಾಕಿಕೊಂಡು ನೀರಿನ ಮಟ್ಟ ಕಡಿಮೆ ಇರುವಲ್ಲಿ ಕುಟುಂಬಸ್ಥರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಅಲ್ಲದೇ ಉಳಿದ ಮಕ್ಕಳ ಕೈ ಹಿಡಿದುಕೊಂಡು ನೀರಿನಲ್ಲಿ ಕರೆದುಕೊಂಡು ಹೋಗುವ ಹಾಗೂ ಶಾಲೆಯಿಂದ ಸಾಮಗ್ರಿಗಳನ್ನು ಸಾಗಿಸುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು
Advertisement
ಒಟ್ಟು 82 ಪುರುಷರು, 27 ಮಹಿಳೆಯರು, 15 ಮಕ್ಕಳು ಹಾಗೂ 3 ನರ್ಸಿಂಗ್ ಸಿಬ್ಬಂದಿಯನ್ನು ಶಾಲೆಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಗುಜರಾತ್‌ನ ಜಖೌ ಬಂದರಿನ ಬಳಿ ಶುಕ್ರವಾರ ಸಂಜೆ 125-140 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ಭೂಕುಸಿತವುಂಟಾಗಿದೆ. ವಿಪರೀತ ಗಾಳಿ ಮಳೆಯ ಹಿನ್ನೆಲೆ ವಿವಿಧ ಸ್ಥಳಗಳಲ್ಲಿ 524ಕ್ಕೂ ಅಧಿಕ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸುಮಾರು ಒಂದು ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್ ತೀರದಲ್ಲಿಅಲ್ಲೋಲ ಕಲ್ಲೋಲ
ಬಿಪರ್‌ಜಾಯ್ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ