ಚಿಕ್ಕಬಳ್ಳಾಪುರ: ತಮಿಳುನಾಡಿನಲ್ಲಿ (Tamil Nadu) ಮಿಚಾಂಗ್ ಚಂಡಮಾರುತ (Michaung Cyclone)) ಅಬ್ಬರದ ಹಿನ್ನೆಲೆ ಚೆನ್ನೈನಲ್ಲಿ (Chennai) ಭಾರೀ ಮಳೆಯಾಗುತ್ತಿದೆ. ಹೀಗಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಡೈವರ್ಟ್ ಮಾಡಲಾಗಿದೆ.
Chennai airport closed
It’s like the famous question of the Capt of the Titanic ship
“Where is this friggin water coming from”? pic.twitter.com/HtHELEbLbj
— Dr MJ Augustine Vinod ???????? (@mjavinod) December 4, 2023
- Advertisement 2-
ಕಳೆದ ರಾತ್ರಿಯಿಂದ ಈವರೆಗೂ 27 ವಿಮಾನಗಳು ಡೈವರ್ಟ್ ಆಗಿವೆ. ದೇಶ-ವಿದೇಶಗಳಿಂದ ಬಂದ ಎಮಿರೇಟ್ಸ್, ಲೂಫ್ತಾನ್ಸ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ 27 ವಿಮಾನಗಳು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಹೀಗಾಗಿ ಮುಂಜಾನೆಯಿಂದ ಮತ್ತೆ ಚೆನ್ನೈಗೆ ತೆರಳಬಹುದು ಎಂದು ಪ್ರಯಾಣಿಕರು ನೀರಿಕ್ಷೆಯಿಂದ ಕಾಯುವಂತಾಗಿದೆ. ಆದರೆ ಮಳೆ ನಿಲ್ಲುವ ಮನ್ಸೂಚನೆ ಇಲ್ಲದ ಕಾರಣ ವಿಮಾನಗಳು ಟೇಕಾಫ್ ಆಗದೆ ಹಾಗೆ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: Cyclone Michaung ಎಫೆಕ್ಟ್- ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯ ಎಚ್ಚರಿಕೆ
- Advertisement 3-
- Advertisement 4-
ಚಂಡಮಾರುತ ಅಬ್ಬರ ಹಿನ್ನೆಲೆ ಮಂಗಳವಾರ ತಮಿಳುನಾಡಿನ 4 ಜಿಲ್ಲೆಗಳಲ್ಲಿ ರಜೆ (Holiday) ಘೋಷಿಸಲಾಗಿದೆ. ಚೆನ್ನೈ, ತಿರುವಳ್ಳೂರ್, ಕಾಂಚೀಪುರಂ ಹಾಗೂ ಚೆಂಗಲಪಟ್ಟು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: Cyclone Michaung- ನೆಲ್ಲೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಲಕ ದುರ್ಮರಣ