ನೈಪಿಡಾವ್: ಬಂಗಾಳಕೊಲ್ಲಿಯಲ್ಲಿ (Bay of Bengal) ಹುಟ್ಟಿಕೊಂಡಿರುವ ಮೋಚಾ ಚಂಡಮಾರುತ (Cyclone Mocha) ಭಾರತ, ಬಾಂಗ್ಲಾ (Bangladesh) ಹಾಗೂ ಮ್ಯಾನ್ಮಾರ್ (Myanmar) ದೇಶಗಳಲ್ಲಿ ಭೀತಿ ಹುಟ್ಟಿಸಿದೆ. ಇದು 1982ರ ಬಳಿಕ ಬಂಗಾಳಕೊಲ್ಲಿಯಲ್ಲಿನ 2ನೇ ಅತ್ಯಂತ ತೀವ್ರವಾದ ಚಂಡಮಾರುತ ಎನ್ನಲಾಗಿದೆ. ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ನಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿದೆ.
Advertisement
ಚಂಡಮಾರುತದ ಹೊಡೆತಕ್ಕೆ ಮ್ಯಾನ್ಮಾರ್ನ ರಖೈನ್ ರಾಜ್ಯದಲ್ಲಿ ಸಿಟ್ವೆ ಟೌನ್ಶಿಪ್ ಬಳಿ ಭೂಕುಸಿತವಾಗಿದೆ. ಕಟ್ಟಡವೊಂದರ ಛಾವಣಿ ಕುಸಿದು ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ. ರಸ್ತೆಗಳು ನೀರಿನಿಂದ ತುಂಬಿ ಹರಿದು ನದಿಗಳಾಗಿ ಪರಿವರ್ತನೆಗೊಂಡಿವೆ. ಮರ, ಕಂಬಗಳು ಬಿದ್ದು, ಸಂಪರ್ಕವೂ ಕಡಿತಗೊಂಡಿದೆ ಎಂದು ವರದಿಯಾಗಿದೆ.
Advertisement
Advertisement
ಚಂಡಮಾರುತ ಗಂಟೆಗೆ ಸುಮಾರು 209 ಕಿ.ಮೀ ವೇಗದ ಪ್ರಬಲ ಗಾಳಿ ಹೊಂದಿದೆ ಎನ್ನಲಾಗಿದೆ. ಇದರಿಂದ ಹಲವು ನಗರಗಳ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು, ಮೊಬೈಲ್ ಫೋನ್ ಟವರ್ಗಳು, ದೋಣಿಗಳು ಮತ್ತು ದೀಪದ ಕಂಬಗಳಿಗೆ ಹಾನಿಯಾಗಿದೆ. ಬಲವಾದ ಗಾಳಿಯಿಂದಾಗಿ ಸಿಟ್ವೆ ಟೌನ್ಶಿಪ್ನ ಎತ್ತರದ ಪ್ರದೇಶಗಳಲ್ಲಿ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 20,000 ಜನರಲ್ಲಿ 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಹೆಚ್ಚು ಮಕ್ಕಳನ್ನ ಹೆರಲು ಚೀನಾ ಪ್ರೋತ್ಸಾಹ – 20ಕ್ಕೂ ಹೆಚ್ಚು ನಗರಗಳಲ್ಲಿ ಹೊಸ ಯೋಜನೆ ಜಾರಿಗೆ ಪ್ಲ್ಯಾನ್
Advertisement
ಮ್ಯಾನ್ಮಾರ್ ಕರಾವಳಿಗೆ ಅಪ್ಪಳಿಸಿರುವ ಮೋಚಾದಿಂದ ಪಾರಾಗಲು ಸಾವಿರಾರು ಜನರನ್ನು ಮಠ, ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಮೋಚಾ ಸುಮಾರು 2 ದಶಕಗಳಲ್ಲಿಯೇ ಬಾಂಗ್ಲಾದೇಶದಲ್ಲಿ ಕಂಡುಬಂದ ಅತ್ಯಂತ ಭಯಾನಕ ಚಂಡಮಾರುತವಾಗಿದೆ ಎಂದು ಮುನ್ಸೂಚಕರು ಎಚ್ಚರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಚಂಡಮಾರುತದ ಎಫೆಕ್ಟ್ ಇರಲಿದ್ದು, ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: 12 ವಿದ್ಯಾರ್ಥಿನಿಯರಿಗೆ ಕಿರುಕುಳ – ಶಿಕ್ಷಕ ಅರೆಸ್ಟ್