ಬೆಂಗಳೂರು: ಮಾಂಡಸ್ ಚಂಡಮಾರುತದ (Cyclone Mandous) ಎಫೆಕ್ಟ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ (Bengaluru Rains) ತಣ್ಣನೆಯ ವಾತಾವರಣ ಮುಂದುವರಿದಿದೆ. ನಿನ್ನೆಯಿಂದ ಜಡಿ ಮಳೆ ಕೂಡ ಹೆಚ್ಚಾಗಿದ್ದು, ಇನ್ನೂ ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ.
ಇಷ್ಟು ದಿನ ಊಟಿ, ಮಲೆನಾಡು ಭಾಗದಲ್ಲಿ ಕಂಡುಬರುತ್ತಿದ್ದ ತಣ್ಣನೆ ವಾತಾವರಣ ಇದೀಗ ಬೆಂಗಳೂರಿಗೂ ಶಿಫ್ಟ್ ಆಗಿದೆ. ಕಳೆದ ಎರಡು ದಿನದಿಂದ ಸೂರ್ಯನನ್ನೇ ಕಾಣದೆ ಕಂಗೆಟ್ಟಿರೋ ಬೆಂಗಳೂರಿಗರಿಗೆ ಇನ್ನು ಎರಡು-ಮೂರು ದಿನ ಇದೇ ರೀತಿಯ ವಾತಾವರಣನ್ನ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಮೈಲಿಗೆ ಆಗುತ್ತೆ ಅಂತಾ ದತ್ತಪೀಠದಲ್ಲಿ ಮೌಲ್ವಿಗಳ ಪೂಜೆಗೆ ನಕಾರ – ಅರ್ಚಕರ ವಿರುದ್ಧ ಆರೋಪ
Advertisement
Advertisement
ತಮಿಳುನಾಡು (TamilNadu), ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾಂಡಸ್ ಅಬ್ಬರದ ಎಫೆಕ್ಟ್ ಬೆಂಗಳೂರಿನ ಮೇಲೆ ಕೊಂಚ ಹೆಚ್ಚಾಗೆ ಬೀರುತ್ತಿದೆ. ಜೊತೆಗೆ ಇನ್ನೂ ಎರಡು ಮೂರು ದಿನಗಳ ಕಾಲ ಚಂಡಮಾರುತದ ಅಬ್ಬರ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮೋಡದ ವಾತಾವರಣದ ಜೊತೆಗೆ ಶೀತಗಾಳಿ ಮತ್ತು ಕೆಲವೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಅವರು ತಿಳಿಸಿದ್ದಾರೆ.
Advertisement
Advertisement
ಬೆಳಗ್ಗೆ ವೇಳೆಯಲ್ಲಿ ನಗರಾದ್ಯಂತ ಹೆಚ್ಚು ಮಂಜು ಮುಸುಕುವ ಸಾಧ್ಯತೆ ಇದೆ. ಈಗಾಗಲೇ ನಗರಾದ್ಯಂತ ಬೆಳಗ್ಗೆ ಸಂದರ್ಭದಲ್ಲಿ ಕಡಿಮೆ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ. ಇದೇ ವಾತಾವರಣ ಇನ್ನೂ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದ್ದು, ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ