ಜವಾದ್ ಚಂಡಮಾರುತದ ಅಬ್ಬರ – 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

Public TV
1 Min Read
cyclone Arabian Sea 2

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಏರ್ಪಟ್ಟಿರುವ ಜವಾದ್ ಚಂಡಮಾರುತದ ಅಬ್ಬರ ಜೋರಾಗಿದೆ. ಸದ್ಯ ಪಶ್ಚಿಮ ವಾಯುವ್ಯ ದಿಕ್ಕಿನತ್ತ ಗಂಟೆಗೆ 25 ಮೈಲಿ ವೇಗದಲ್ಲಿ ಚಲಿಸುತ್ತಿರುವ ಜವಾದ್ ಚಂಡಮಾರುತ ವಿಶಾಖಪಟ್ಟಣದ ಆಗ್ನೇಯ ದಿಕ್ಕಿನಲ್ಲಿ 420 ಕಿಲೋಮೀಟರ್ ದೂರದಲ್ಲಿ ಒಡಿಶಾದ ಗೋಪಾಲಪುರದಿಂದ 530 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ.

Cyclone Gaja 1611

ನಾಳೆ ಬೆಳಗ್ಗೆ ಆಂಧ್ರದ ಉತ್ತರ ಕರಾವಳಿ ತೀರದ ಸನಿಹಕ್ಕೆ ಬರುವ ನಿರೀಕ್ಷೆ ಇದೆ. ಚಂಡಮಾರುತ ತೀರಕ್ಕೆ ಹತ್ತಿರವಾದಂತೆಲ್ಲಾ ದಿಕ್ಕನ್ನು ಬದಲಿಸುವ ಸಾಧ್ಯತೆ ಇದ್ದು, ಪುರಿಯತ್ತ ಅದು ಚಲಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಆಂಧ್ರದ ಕರಾವಳಿಯಲ್ಲಿ ಗಾಳಿ ಸಹಿತ ಮಳೆ ಶುರುವಾಗಿದೆ. ಈಗಾಗಲೇ ಆಂಧ್ರಪ್ರದೇಶದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಹಲವೆಡೆ 200 ಮಿಲಿಮೀಟರ್‌ನಷ್ಟು ಮಳೆ ಸುರಿಯುವ ಸಂಭವ ಇದೆ. ಇದನ್ನೂ ಓದಿ: ಯುವಕರು ಹೋದಲೆಲ್ಲಾ ಮೋದಿ.. ಮೋದಿ..ಅಂತಿದ್ರು, ಈಗ ಮೋದಿ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ: ಸಿದ್ದರಾಮಯ್ಯ

ಹವಾಮಾನ ಇಲಾಖೆಯ ಪ್ರಕಾರ ಸಮುದ್ರದ ಅಲೆಗಳ ಆರ್ಭಟ ನಾಲ್ಕು ಮೀಟರ್‌ವರೆಗೂ ಏಳಬಹುದು. ತಗ್ಗು ಪ್ರದೇಶದ ಜನತೆ ಎಚ್ಚರದಿಂದ ಇರಬೇಕು. ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ. ಪ್ರಧಾನಿ ಮೋದಿ ಕೂಡ ಜವಾದ್ ಚಂಡಮಾರುತದ ಕುರಿತಾಗಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಾಸ್ಕ್ ಧರಿಸದಿದ್ರೆ ಇನ್ಮುಂದೆ ನಗರ ಪ್ರದೇಶದಲ್ಲಿ 250, ಹಳ್ಳಿಗಳಲ್ಲಿ 100 ರೂ. ದಂಡ ಫಿಕ್ಸ್

Share This Article
Leave a Comment

Leave a Reply

Your email address will not be published. Required fields are marked *