– ಫೆಂಗಲ್ ಚಂಡಮಾರುತ ಎಫೆಕ್ಟ್; ನಿರಂತರ ಸುರಿಯುತ್ತಿರೋ ಮಳೆ
ಚೆನ್ನೈ: ಫೆಂಗಲ್ ಚಂಡಮಾರುತ (Cyclone Fengal) ತಂದ ನಿರಂತರ ಮಳೆಯಿಂದಾಗಿ ಭಾನುವಾರ ಸಂಜೆ ಅಣ್ಣಾಮಲೈಯಾರ್ ಬೆಟ್ಟದ (Annamalaiyar Hill Landslide) ಕೆಳಗಿನ ಇಳಿಜಾರುಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಏಳು ಮಂದಿ ಸಿಕ್ಕಿಬಿದ್ದಿದ್ದಾರೆ.
Advertisement
ಸಂತ್ರಸ್ತರು ರಾಜ್‌ಕುಮಾರ್, ಮೀನಾ, ಅವರ ಇಬ್ಬರು ಪುತ್ರಿಯರು ಮತ್ತು ಮೀನಾ ಅವರ ಸಹೋದರನ ಕುಟುಂಬದ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಕುಟುಂಬಗಳು ವಾವುಸಿ ನಗರ 11 ನೇ ಬೀದಿಯಲ್ಲಿ ವಾಸಿಸುತ್ತಿದ್ದವು. ಇದು 300 ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಜನನಿಬಿಡ ಪ್ರದೇಶವಾಗಿದೆ.
Advertisement
ಇಂದು ಸಂಜೆ 4:30 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ನಿರಂತರ ಭಾರೀ ಮಳೆಯಾಗುತ್ತಿದೆ. ಇದು ಎರಡು ಮನೆಗಳನ್ನು ನಾಶಪಡಿಸಿದ ಬೃಹತ್ ಬಂಡೆಗಳ ಕುಸಿತಕ್ಕೆ ಕಾರಣವಾಗಿದೆ. ಹಾನಿಗೊಳಗಾದ ಸಿಮೆಂಟ್‌ಶೀಟ್ ಆಧಾರಿತ ಮನೆಯೊಂದರಲ್ಲಿ ಮಕ್ಕಳು ಸೇರಿದಂತೆ ಏಳು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
Advertisement
ಜಿಲ್ಲಾ ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ ಸರವಣನ್ ಮಾತನಾಡಿ, ದುರಂತದ ಕರೆ ಸ್ವೀಕರಿಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು. ನೆರೆಹೊರೆಯವರು ಏಳು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ಅವರೊಂದಿಗೆ ಫೋನ್ ಸಂಪರ್ಕವನ್ನು ಸ್ಥಾಪಿಸಲು ನಮಗೆ ಸಾಧ್ಯವಾಗಲಿಲ್ಲ. ಅವರನ್ನು ಪತ್ತೆ ಮಾಡಲು ಮತ್ತು ರಕ್ಷಿಸಲು ನಮ್ಮ ತಂಡಗಳು ಅವಿರತವಾಗಿ ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.