ಬೆಂಗಳೂರು: ಫೆಂಗಲ್ ಚಂಡಮಾರುತ ಎಫೆಕ್ಟ್‌ನಿಂದಾಗಿ ಬೆಂಗಳೂರಲ್ಲಿ (Bengaluru Rains) ಕಳೆದ 2 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಹೊಸೂರು ಹೈವೇಯಲ್ಲಿ ನೀರು ತುಂಬಿ ಸಂಚಾರಕ್ಕೆ ಸಮಸ್ಯೆಯಾಗಿದೆ.
ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ಹೊಸೂರು-ಬೆಂಗಳೂರು ಮುಖ್ಯರಸ್ತೆಯ ನೆರಳೂರಲ್ಲಿ ನಿಂತಿದ್ದ ನೀರು ಅರ್ಧದಷ್ಟು ಟ್ರಕ್ ಅನ್ನೇ ಮುಳುಗಿಸಿಕೊಂಡಿದೆ. ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಪ್ರಕರಣ – ಕಿಂಗ್‌ಪಿನ್ ಸೇರಿ 10 ಮಂದಿ ಅರೆಸ್ಟ್
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕನ್ನಡಿ ಹಿಡಿದಂತಿದೆ. ವಾಹನಗಳು ಸಂಚಾರ ಮಾಡಲು ಸಾಧ್ಯ ಆಗದೇ ಪರದಾಡಿವೆ. ಅಂಡರ್ ಪಾಸ್ ಮೂಲಕ ರಸ್ತೆ ದಾಟಲು ಕೂಡ ಸಾಧ್ಯ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯ ಅಂಡರ್‌ಪಾಸ್ ಮುಂಭಾಗ ನೀರು ತುಂಬಿದೆ.
ನಗರದಲ್ಲಿ ಮೂರು ದಿನಗಳಿಂದ ತುಂತುರು ಮಳೆಯಾದ ಹಿನ್ನೆಲೆಯಲ್ಲಿ ಮಳೆಯ ತೇವ ಹೆಚ್ಚಾಗಿ ವಿದ್ಯಾಪೀಠ ವಾರ್ಡ್‌ನಲ್ಲಿ ಕಾಂಪೌಂಡ್ ಮಣ್ಣು ಕುಸಿದಿದೆ. ಎರಡು ತಿಂಗಳ ಹಿಂದೆ ಮಳೆಗೆ ಪಾರ್ಕ್ ಗೋಡೆ ಕುಸಿದಿತ್ತು. ಮತ್ತೆ ಮೂರು ದಿನಗಳಿಂದ ತುಂತುರು ಮಳೆಯ ಹಿನ್ನೆಲೆ, ಕಾಂಪೌಂಡ್ ಜಾಗದಲ್ಲಿ ಮಣ್ಣು ಕುಸಿತ ಆಗಿದೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯ ಒಳಗೆ ಭಾರೀ ಮಳೆಯ ಎಚ್ಚರಿಕೆ
ವಿಧಾನಸೌಧದ ಎದುರು ನೆಲಕ್ಕುರುಳಿದ ಮರ
ನಿರಂತರ ಮಳೆಯಿಂದಾಗಿ ವಿಧಾನಸೌಧದ ಎದುರು ಮರ ನೆಲಕ್ಕುರುಳಿದೆ. ಫುಟ್‌ಪಾತ್ ಮೇಲೆ ಮರ ಬಿದ್ದಿದ್ದರಿಂದ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗಿದೆ. ಆದರೆ, ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ವಿಳಂಬವಾಗಿದೆ.