ನವದೆಹಲಿ: ಗುರುಗ್ರಾಮ್ ಎಕ್ಸ್ಪ್ರೆಸ್ವೇನಲ್ಲಿ (Gurugram Expressway) ಸೈಕಲ್ ಸವಾರಿನಿಗೆ (Cyclist) ಬಿಎಮ್ಡಬ್ಲ್ಯೂ (BMW) ಕಾರ್ ಗುದ್ದಿ ಸೈಕಲ್ ಸವಾರ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
Advertisement
ಗುರುಗ್ರಾಮ್ ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸುತ್ತಿದ್ದ ಬಿಎಮ್ಡಬ್ಲ್ಯೂ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡ ಸೈಕಲ್ ಸವಾರ ಸುವೇಂದು ಚಟರ್ಜಿಯನ್ನು (50) ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಗಾಯಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಫುಟ್ಓವರ್ ಸೇತುವೆ ಕುಸಿತ – 60 ಅಡಿ ಎತ್ತರದಿಂದ ಬಿದ್ದ 20 ಮಂದಿ ಸ್ಥಿತಿ ಗಂಭೀರ
Advertisement
Advertisement
ಅಪಘಾತದಲ್ಲಿ ಕಾರ್ನ ಟಯರ್ ಬ್ಲಾಸ್ಟ್ ಆಗಿದ್ದು, ಮುಂಭಾಗದ ಗ್ಲಾಸ್ ಪುಡಿಯಾಗಿದೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಿಎಮ್ಡಬ್ಲ್ಯೂ ಚಾಲಕನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ