ಕಾರವಾರ: ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಛತ್ತೀಸಗಡ ಮೂಲದ ದೇವಿಕಾ ಸಂಜಯ ವಾಸ್ವಾನಿ (25) ಮೃತಪಟ್ಟ ದುರ್ದೈವಿ. ಬೀರಂಪಾಲಿ ಗ್ರಾಮದಲ್ಲಿರುವ ಹೋಂ ಸ್ಟೇನಿಂದ ಸೈಕ್ಲಿಂಗ್ ಮಾಡುತ್ತಾ ದೇವಿಕಾ ಸಂಜಯ ವಾಸ್ವಾನಿ ಅಕೋಡಾ ಗ್ರಾಮದ ಕಡೆ ಹೋಗುತ್ತಿದ್ದರು. ಆಗ ಏಕಾಏಕಿ ಸೈಕಲ್ ಸ್ಕಿಡ್ ಆಗಿದೆ ಈ ವೇಳೆ ವೇಗವನ್ನು ನಿಯಂತ್ರಿಸಲಾಗದೆ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಸೈಕಲ್ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಚಾಟ್ ಮಾಡಿದ್ದಕ್ಕೆ ಹೆಂಡತಿಯನ್ನೇ ಉಸಿರುಗಟ್ಟಿಸಿ ಕೊಂದ!
ಪರಿಣಾಮ ದೇವಿಕಾ ಸಂಜಯ ವಾಸ್ವಾನಿಯ ಬಲ ತೋಳು, ತಲೆಯ ಹಿಂಬದಿಗೆ ಹೆಚ್ಚಿನ ಗಾಯವಾಗಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ ಧೈರ್ಯ ತುಂಬಿದ ಬೊಮ್ಮಾಯಿ