ಬೆಂಗಳೂರು: ತಾಂತ್ರಿಕತೆ ಬೆಳೆದಷ್ಟೂ ಸೈಬರ್ ಕಳ್ಳರ (Cyber Thieves) ಹಾವಳಿ ಹೆಚ್ಚಾಗ್ತಿದೆ. ಇಷ್ಟು ದಿನ ಬ್ಯಾಂಕ್ ಖಾತೆಗಳಿಗೆ (Bank Account) ಕನ್ನ ಹಾಕ್ತಿದ್ದ ಸೈಬರ್ ಕಳ್ಳರು ಇದೀಗ ವಿದ್ಯುತ್ ಬಿಲ್‌ನಲ್ಲೂ (Electricity Online Bill) ಕೈಚಳಕ ತೋರಿಸಿದ್ದಾರೆ.
ಹೌದು. ಬೆಸ್ಕಾಂ (BESCOM) ಅಧಿಕಾರಿಗಳು ಅಂತಾ ಹೇಳಿಕೊಂಡು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವ ನೆಪದಲ್ಲಿ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಂದ 53 ಸಾವಿರ ರೂ. ಎಗರಿಸಿದ್ದಾರೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಅವರನ್ನ ವಂಚಿಸಿ 53 ಸಾವಿರ ರೂ. ಎಗಿರಿಸಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್ – ಪ್ರಸಕ್ತ ವರ್ಷದಲ್ಲಿ KRSಗೆ ದಾಖಲೆ ಒಳ ಹರಿವು
Advertisement
Advertisement
ಬೆಸ್ಕಾಂ ಅಧಿಕಾರಿಗಳು ಅಂತಾ ಹೇಳಿಕೊಂಡು ನಾರಾಯಣ್ ಪ್ರಸಾದ್ ಅವ್ರಿಗೆ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟದೇ ಇದ್ರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದಾಗ ನಾರಾಯಣ್ ಬಿಲ್ ಪಾವತಿಸಲು ಒಪ್ಪಿಕೊಂಡಿದ್ದಾರೆ. ನಂತರ ಒಂದು ಲಿಂಕ್ ಕಳಿಸಿ ಅದನ್ನು ಕ್ಲಿಕ್ ಮಾಡಿ ಫಾಲೋ ಮಾಡಿ ಅಂತಾ ಹೇಳಿದ್ದಾರೆ, ಅವರು ಹೇಳಿದಂತೆ ನಾರಾಯಣ್ ಲಿಂಕ್ ಕ್ಲಿಕ್ ಮಾಡಿ 1 ರೂ. ಕಳುಹಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವರ ತವರಿನಲ್ಲಿ ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ ಮಕ್ಕಳು!
Advertisement
Advertisement
ನಂತರ ತಮ್ಮ ಕೈಚಳಕ ತೋರಿಸಿದ ಸೈಬರ್ ಕಳ್ಳರು ಹಂತ ಹಂತವಾಗಿ ಅಕೌಂಟ್‌ನಿಂದ 53 ಸಾವಿರ ಕಟ್ ಆಗಿದೆ. ಸಂಬಂಧಪಟ್ಟ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಪ್ರಸಾದ್ ದೂರು ದಾಖಲಿಸಿದ್ದಾರೆ.
Web Stories