Connect with us

Bengaluru City

ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

Published

on

ಬೆಂಗಳೂರು: ಎಸ್‍ಬಿಐ ಸೇರಿದಂತೆ ಇತರೆ ಬ್ಯಾಂಕುಗಳು ಎಟಿಎಂ ವಿತ್ ಡ್ರಾವನ್ನು ಕಡಿಮೆಗೊಳಿಸಲು ಹೊರಟಿರುವ ನೂತನ ನಿಯಮ ಹಾಸ್ಯಸ್ಪದವಾಗಿದೆ ಎಂದು ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹೌದು, ದೇಶದಲ್ಲಿ ಎಟಿಎಂ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದಿಂದ, ಭಾರತದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾದ ಎಸ್‍ಬಿಐ ಸೇರಿದಂತೆ ಹಲವು ಬ್ಯಾಂಕ್‍ಗಳು ಗ್ರಾಹಕರಿಗೆ ನೀಡಿದ್ದ ಎಟಿಎಂ ವಿತ್‍ಡ್ರಾ ಲಿಮಿಟ್‍ನ್ನು ಕಡಿತಗೊಳಿಸಲು ಮುಂದಾಗಿವೆ. ಆದರೆ ಇದಕ್ಕೆ ಸೈಬರ್ ತಜ್ಞರು ವಿತ್‍ಡ್ರಾ ಮಿತಿ ಕಡಿಮೆಗೊಳಿಸಿದರೆ ಸೈಬರ್ ವಂಚಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬ್ಯಾಂಕುಗಳು ಜಾರಿಗೆ ತರಲು ಹೊರಟಿರುವ ವಿತ್‍ಡ್ರಾ ಲಿಮಿಟ್ ಹಾಸ್ಯಾಸ್ಪದ ಸಂಗತಿ ಎಂದು ಸೈಬರ್ ತಜ್ಞ ಹರ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಟಿಎಂ ಚೋರರ ಪ್ರಕರಣಗಳು ದಿನೇ ದಿನೇ ದಾಖಲಾಗುತ್ತಿದ್ದರಿಂದ, ಆರ್‌ಬಿಐ ಕೂಡ 2019ರ ಮಾರ್ಚ್ ಒಳಗಡೆ ಎಟಿಎಂಗಳಲ್ಲಿ ಸೈಬರ್ ಸೆಕ್ಯೂರಿಟಿ ಹಾಗೂ ಆಂಟಿ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ದೇಶದ ಬಹುತೇಕ ಎಟಿಎಂಗಳಲ್ಲಿ ಆಂಟಿ ಸ್ಕಿಮ್ಮಿಂಗ್ ಡಿವೈಸ್‍ಗಳನ್ನು ಬ್ಯಾಂಕುಗಳು ಸ್ಥಾಪಿಸಿಲ್ಲ. ಇದನ್ನು ಮಾಡದ ಬ್ಯಾಂಕುಗಳು ಎಟಿಎಂ ವಂಚನೆ ಕೇಸ್ ಕಡಿಮೆ ಮಾಡಲು ಎಟಿಎಂ ವಿತ್ ಡ್ರಾ ಲಿಮಿಟ್ಸ್ ಕಡಿಮೆ ಮಾಡಿದ್ದೇವೆ ಎಂದು ಹೇಳುತ್ತಿವೆ ಎಂದಿದ್ದಾರೆ.

ಎಟಿಎಂಗೆ ಕನ್ನ ಹಾಕುವ ಡಿಜಿಟಲ್ ಹ್ಯಾಕರ್ಸ್‍ಗಳು ಎಟಿಎಂ ಮೆಷಿನ್ ನೊಳಗೆ ಗ್ರಾಹಕರು ಕಾರ್ಡನ್ನು ಹಾಕಿದ ತಕ್ಷಣ ಮಾಹಿತಿಗಳನ್ನು ರವಾನಿಸಿಕೊಳ್ಳುವ ತಂತ್ರಜ್ಞಾನ ಹೊಂದಿದ್ದು, ನೇರವಾಗಿ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಈ ವಿತ್ ಡ್ರಾ ಲಿಮಿಟ್ ಕಡಿತದಿಂದ ಎಟಿಎಂ ಹ್ಯಾಕರ್ಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹರ್ಷ ಹೇಳಿದ್ದಾರೆ.

ಆಕ್ಟೋಬರ್ 31 ರಿಂದ 40 ಸಾವಿರದಿಂದ 20 ಸಾವಿರಕ್ಕೆ ಎಟಿಎಂ ವಿತ್ ಡ್ರಾ ಲಿಮಿಟ್ಸ್ ಕಡಿತಗೊಳಿಸಲು ಎಸ್‍ಬಿಐ ಮುಂದಾಗಿದೆ ಎನ್ನಲಾಗಿದೆ. ಎಟಿಎಂ ವಂಚನೆಗಳನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಎಟಿಎಂ ವಿತ್‍ ಡ್ರಾ ಮಿತಿ ಕಡಿತಗೊಳಿಸಲು ಎಸ್‍ಬಿಐ ಚಿಂತನೆ: ಎಷ್ಟಿತ್ತು? ಎಷ್ಟಾಗುತ್ತೆ?

ಏನಿದು ಸ್ಕಿಮ್ಮಿಂಗ್ ಮಷಿನ್?
ಕಳ್ಳರು ಎಟಿಎಂ ಮಷಿನ್ ಮೇಲೆ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡುತ್ತಾರೆ. ಕಾರ್ಡ್ ಸ್ಪೈಪ್ ಮಾಡುವ ಜಾಗದಲ್ಲಿ ಸಣ್ಣದೊಂದು ಕಾರ್ಡ್ ಹಾಕ್ತಾರೆ. ಗ್ರಾಹಕರು ಸ್ಪೈಪ್ ಮಾಡಿದ ಕೂಡಲೇ ಕಾರ್ಡ್‍ನಲ್ಲಿದ್ದ ಮ್ಯಾಗ್ನೆಟ್ಟಿಂಗ್ ಸ್ಟ್ರೇಬ್ಸ್ ಹ್ಯಾಕ್ ಆಗುತ್ತೆ. ಬಳಿಕ ಹಿಡನ್ ಕ್ಯಾಮೆರಾದಿಂದ ಪಾಸ್‍ವರ್ಡ್‍ನ್ನು ಕ್ಯಾಪ್ಚರ್ ಮಾಡ್ತಾರೆ. ಬಳಿಕ ನಕಲಿ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *