ಬೆಂಗಳೂರು: ವಿದ್ಯುತ್ ಬಿಲ್ (Electricity Bill) ಹೆಸರಲ್ಲಿ ಜನರನ್ನು ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ವಿದ್ಯುತ್ ಬಿಲ್ ಬಾಕಿ ಇದ್ದರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತೀವಿ ಎಂದು ಹೆದರಿಸಿ ಹಣ ದೋಚುವ ಜಾಲವೊಂದು ಬೀಡುಬಿಟ್ಟಿದೆ.
ಆಧುನಿಕತೆ ಬೆಳದಂತೆ ವಂಚನೆ ಜಾಲ ಹೆಚ್ಚಾಗುತ್ತಿದೆ. ಓಟಿಪಿ ಹ್ಯಾಕ್, ಆಧಾರ್ ಹ್ಯಾಕ್, ಲೋನ್ ಆಪ್ ಹ್ಯಾಕ್ ಮಾಡಿ ಹಣ ದೋಚುವ ಪ್ರಕರಣ, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚುವ ಪ್ರಕರಣ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಕೆಇಬಿ (KEB) ಹೆಸರಲ್ಲಿ ಹಣ ದೋಚುವ ಜಾಲ ಬೀಡು ಬಿಟ್ಟಿದೆ. ಬೆಂಗಳೂರಿಗರು ಇಂತಹ ಪ್ರಕರಣಗಳಿಂದ ಎಚ್ಚರಿಕೆ ವಹಿಸಬೇಕಿದೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ
Advertisement
Advertisement
ಬೆಂಗಳೂರಿನ ಜಯನಗರ (Jayanagar) ನಿವಾಸಿ ಕೇಶವ್ ಕುಮಾರ್ ಈ ಜಾಲಕ್ಕೆ ಸಿಲುಕಿ ಪರದಾಡುತ್ತಾ ಇದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ. ಕರೆಂಟ್ ಕಟ್ ಮಾಡುತ್ತೇವೆ ಎಂದು ಮೆಸೇಜ್ ಬಂದಿದೆ. ಕರೆಂಟ್ ಕಟ್ ಆಗುತ್ತದೆ ಎನ್ನುವ ಭಯಕ್ಕೆ ಮೆಸೇಜ್‌ನಲ್ಲಿದ್ದ ನಂಬರ್‌ಗೆ ಪೇಟಿಎಂ ಮಾಡಿದ ತಕ್ಷಣ ಫೋನ್ ಹ್ಯಾಕ್ ಮಾಡಿದ್ದಾರೆ. ಪಾಸ್‌ವರ್ಡ್ ತಿಳಿದುಕೊಂಡು ಖಾತೆಯಿಂದ 15,000 ಹಣ ಎಗರಿಸಿದ್ದಾರೆ. ಇದನ್ನೂ ಓದಿ: ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು
Advertisement
ಇನ್ನೂ ಹಣ ಎಗರಿಸುತ್ತಿದ್ದಂತೆ ಎಚ್ಚೆತ್ತ ಕೇಶವ್ ಕುಮಾರ್ ಯಾರು ನೀವು? ಐಡಿ ಕಾರ್ಡ್ ಕಳುಹಿಸಿ ಎಂದು ಮೆಸೇಜ್ ಮಾಡಿದರೇ, ನಗ್ನ ಫೋಟೊ ಕಳುಹಿಸಿ ಭಯ ಪಡಿಸಿದ್ದಾರೆ. ಇವರು ಸೈಬರ್ ಖದೀಮರು ಅಂತಾ ಗೊತ್ತಾಗುತ್ತಿದ್ದಂತೆ ಕೇಶವ್ ಕುಮಾರ್ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ. ಇದನ್ನೂ ಓದಿ: ಐಸಿಸ್ ಸೇರಲು ಯುವಕರಿಗೆ ಪ್ರಚೋದನೆ – ಇಬ್ಬರು ಉಗ್ರರ ಅರೆಸ್ಟ್
Advertisement
ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ಕೊಟ್ಟರೆ ಇದು ಕಾಮನ್ ಆಗಿದೆ, ಎಚ್ಚರಿಕೆ ವಹಿಸಿ ಎನ್ನುತ್ತಾರೆ. ಇಂತಹ ಸಮಸ್ಯೆಯನ್ನು ಬೆಂಗಳೂರಿಗರು ತುಂಬಾ ಜನ ಅನುಭವಿಸುತ್ತಾ ಇದ್ದಾರೆ. ಎಚ್ಚರಿಕೆ ಬಹುಮುಖ್ಯ ಅಂತಿದ್ದಾರೆ ಎಂದು ಕೇಶವ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ
ಒಟ್ಟಾರೆ ವಿದ್ಯುತ್ ಬಿಲ್ ನೆಪದಲ್ಲಿ ವಂಚನೆ ಹೆಚ್ಚಾಗಿದ್ದು, ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಕಟ್ಟುವ ಹಾಗಿದ್ದರೆ ಬೆಸ್ಕಾಂ (BESCOM) ಅಧಿಕಾರಿಗಳನ್ನು ಸಂಪರ್ಕ ಮಾಡಿಯೇ ಕಟ್ಟಬೇಕಿದೆ. ಇಂಧನ ಇಲಾಖೆ ಇಂತಹ ಜಾಲದ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ