ಪಾಟ್ನಾ: ಸೈಬರ್ ವಂಚನೆಯಲ್ಲಿ ತೊಡಗಿದ್ದ 33 ವಂಚಕರನ್ನು ಬಿಹಾರದ ಥಾಲಪೋಶ್ ಗ್ರಾಮದಲ್ಲಿ ಬಂಧಿಸಲಾಗಿದೆ.
ಸ್ಥಳೀಯ ಮಾಹಿತಿದಾರರು ನೀಡಿದ ಸುಳಿವಿನ ಮೇರೆಗೆ ದಾಳಿ ನಡೆಸಲಾಗಿದೆ. ಅದರಂತೆ, ವಿಶೇಷ ತಂತ್ರಗಳು ಮತ್ತು ಶಸ್ತ್ರಾಸ್ತ್ರಗಳ ಜಂಟಿ ತಂಡ ಹಾಗೂ ನಾವಡ ಪೊಲೀಸರು ಗ್ರಾಮದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಾವಡದ ಎಸ್‍ಡಿಪಿಒ ಮುಖೇಶ್ ಸಹಾ ತಿಳಿಸಿದ್ದಾರೆ.
Advertisement
Advertisement
ನಾವು ಇಲ್ಲಿಯವರೆಗೆ ಒಂದೇ ದಾಳಿಯಲ್ಲಿ ಅತಿ ಹೆಚ್ಚು ಸೈಬರ್ ವಂಚಕರನ್ನು ಬಂಧಿಸಿದ್ದೇವೆ. 3 ಲ್ಯಾಪ್‍ಟಾಪ್‍ಗಳು, 3 ಡಜನ್‍ಗಿಂತಲೂ ಹೆಚ್ಚು ಮೊಬೈಲ್ ಫೋನ್‍ಗಳು, 1 ಮೋಟಾರ್ ಬೈಕ್ ಮತ್ತು ಇತರ ಉಪಕರಣಗಳನ್ನು ವಂಚಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ
Advertisement
ಅಪರಾಧಗಳನ್ನು ಕಾರ್ಯಗತಗೊಳಿಸಲು ಪ್ರತಿದಿನ ಥಾಲಪೋಶ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಸೈಬರ್ ವಂಚಕರು ಸೇರುತ್ತಿದ್ದರು. ಈ ಕುರಿತು ನಾವಡ ಎಸ್ಪಿಗೆ ಮಾಹಿತಿ ನೀಡಿ ಎರಡು ಠಾಣೆಗಳ ಪೊಲೀಸ್ ಸಿಬ್ಬಂದಿ ಹಾಗೂ ಸ್ವಾಟ್ ತಂಡವನ್ನೊಳಗೊಂಡ ದೊಡ್ಡ ತಂಡವನ್ನು ರಚಿಸಿ ಗ್ರಾಮಕ್ಕೆ ದಾಳಿ ಮಾಡಿದೆವು ಎಂದು ತಿಳಿಸಿದರು.
Advertisement
ಗ್ರಾಮದ ಕೃಷಿ ಭೂಮಿಯಲ್ಲಿ ವಂಚಕರು ಜಮಾಯಿಸಿದ್ದರು. ಪೊಲೀಸರನ್ನು ಕಂಡ ಅವರು ಪರಾರಿಯಾಗಲು ಯತ್ನಿಸಿದರು. ಆದರೂ ನಾವು ಅವರನ್ನು ಬೆನ್ನಟ್ಟಿ 33 ಮಂದಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಇದನ್ನೂ ಓದಿ: ಹಿಜಬ್‍ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು
ಕೆಲವು ಸೈಬರ್ ಆರೋಪಿಗಳು ಸ್ಥಳದಿಂದ ಪರಾರಿಯಾದರು. ಅವರು ಅಪರಾಧವನ್ನು ಕಾರ್ಯಗತಗೊಳಿಸಲು ಕೃಷಿ ಕ್ಷೇತ್ರದಲ್ಲಿ ವರ್ಚುವಲ್ ಕಾಲ್ ಸೆಂಟರ್ ನಡೆಸುತ್ತಿದ್ದರು ಎಂದರು.
ಗ್ರಾಮದಲ್ಲಿ ಮೊಬೈಲ್ ಟವರ್‌ಗಳ ಸಿಗ್ನಲ್ ಚೆನ್ನಾಗಿದ್ದ ಕಾರಣ ಅವರು ಅಪರಾಧವನ್ನು ಕಾರ್ಯಗತಗೊಳಿಸಲು ಆ ಗ್ರಾಮದಲ್ಲಿ ಸೇರುತ್ತಿದ್ದರು ಎಂದು ಮಾಹಿತಿ ನೀಡಿದರು.
ವಂಚಕರು ಮೊಬೈಲ್ ಸಂಖ್ಯೆಗಳಲ್ಲಿ ಪಠ್ಯ ಸಂದೇಶಗಳು ಮತ್ತು ಲಿಂಕ್‍ಗಳನ್ನು ಕಳುಹಿಸುತ್ತಿದ್ದರು. ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಕರೆಗಳನ್ನು ಅನುಸರಿಸುತ್ತಾರೆ. ಆ ಲಿಂಕ್‍ಗಳಿಗೆ ಯಾರಾದರೂ ಉತ್ತರಿಸಿದರೆ, ಅವರು ಆ ವ್ಯಕ್ತಿಗಳನ್ನು ವಂಚಿಸುತ್ತಿದ್ದರು ಎಂದು ತಿಳಿಸಿದರು.