ಬೆಂಗಳೂರು: ಸೈಬರ್ ವಂಚನೆಗೆ ಸ್ನೇಹಿತನ ಅಕೌಂಟ್ ಬಳಕೆ ಮಾಡಿಕೊಂಡು ಬರೋಬ್ಬರಿ 7 ಕೋಟಿ ರೂ. ವರ್ಗಾವಣೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಆಯುಷ್ & ಇತರರು ಸೇರಿಕೊಂಡು ವಿದ್ಯಾರ್ಥಿಯೊಬ್ಬನಿಗೆ ವಂಚನೆ ಮಾಡಿದ್ದಾರೆ. ವಂಚನೆಗೊಳಗಾದ ವಿದ್ಯಾರ್ಥಿ ಹಾಗೂ ಆಯುಷ್ ಕಳೆದ ಒಂದು ವರ್ಷದಿಂದ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಮ್ಮದು ‘ವಿರೋಶ್’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
ಆಯುಷ್ ತನ್ನ ಅಕೌಂಟ್ ಬ್ಲಾಕ್ ಆಗಿದೆ ಎಂದು ವಿದ್ಯಾರ್ಥಿ ಅಕೌಂಟ್ ಡಿಟೇಲ್ಸ್ ಪಡೆದಿದ್ದ. ಹೀಗಾಗಿ ಆಯುಷ್‌ನ ನಂಬಿ ವಿದ್ಯಾರ್ಥಿ ಪಾಸ್‌ಬುಕ್, ಎಟಿಎಂ ಕಾರ್ಡ್, ಮೊಬೈಲ್ ಸಿಮ್ ಕೊಟ್ಟಿದ್ದ. ಅದಾದ ಬಳಿಕ ಬ್ಯಾಂಕ್‌ನಿಂದ ವಿದ್ಯಾರ್ಥಿಗೆ ಕರೆ ಬಂದಿತ್ತು. ನಿಮ್ಮ ಅಕೌಂಟ್ ಮೂಲಕ ಸೈಬರ್ ವಂಚನೆ ಆಗಿದ್ದು, 7 ಕೋಟಿ ರೂ. ಹಣ ವರ್ಗಾವಣೆ ಆಗಿದೆ ಎಂದು ಮಾಹಿತಿ ನೀಡಿದ್ದರು. ಬಳಿಕ ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಲಾಯ್ತು.
ಸದ್ಯ ವಿದ್ಯಾರ್ಥಿ ಉತ್ತರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಿದ್ದರಾಮಯ್ಯರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ: ಪರಮೇಶ್ವರ್ ಬ್ಯಾಟಿಂಗ್

