ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 13,721 ರೂ ಡ್ರಾ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಮೂಲತಃ ತುಮಕೂರು ಮೂಲದ ಯುವಕ ಕಿರಣ್ ಕುಮಾರ್ ಹಣ ಕಳೆದು ಕೊಂಡ ಯುವಕ. ಕಿರಣ್ ಯಾರಿಗೂ ಎಟಿಎಂ ಪಾಸ್‍ವರ್ಡ್ ನೀಡದೇ ಇದ್ದರೂ ಅವರ ಐಡಿಬಿಐ ಬ್ಯಾಂಕ್ ಖಾತೆಯಿಂದ ಕಳೆದ ಡಿಸೆಂಬರ್ 12ರ ರಾತ್ರಿ, ಸುಮಾರು 13,721 ರೂ. ಹಣ ನಾಪತ್ತೆಯಾಗಿದೆ.
Advertisement
ಹಾಸನದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಿರಣ್ ಪ್ರಸ್ತುತ ಖರ್ಚಿಗೂ ಹಣ ಇಲ್ಲದೇ ಪರದಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನೋಡುಗರಿಗೆ ಇದು ಸಣ್ಣ ಪ್ರಮಾಣದ ಹಣ ಇರಬಹುದು. ಆದರೆ ನನಗಿದು ದೊಡ್ಡ ಮೊತ್ತ. ಅಷ್ಟಕ್ಕೂ ನಾನು ನನ್ನ ಅಕೌಂಟ್ ಹಾಗೂ ಎಟಿಎಂ ನಂಬರ್ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೂ ಹಣ ಡ್ರಾ ಆಗಿದೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಹಣ ಡ್ರಾ ಆದ ಕುರಿತು ಬ್ಯಾಂಕ್‍ನ ಮಿನಿಸ್ಟೇಟ್ ಮೆಂಟ್ ತೆಗೆಸಿ ನೋಡಿದರೆ, ದೂರದ ಪ್ಯಾಲೆಸ್ಟೇನ್ ನಲ್ಲಿ ಹಣ ಡ್ರಾ ಮಾಡಲಾಗಿದೆ ಎಂದು ತೋರಿಸುತ್ತಿದೆ. ಈ ಬಗ್ಗೆ ಐಡಿಬಿಐ ಬ್ಯಾಂಗ್ ಗೆ ಹೋಗಿ ಕೇಳಿದರೆ, ಪೊಲೀಸ್ ದೂರು ಕೊಡಿ ಎಂದು ಹೇಳಿದ್ದಾರೆ. ಪೊಲೀಸ್ ಠಾಣೆಗೆ ಹೋದರೆ ಇಂಥ ಕೇಸ್ ಗಳು ಸಾಕಷ್ಟು ಬರುತ್ತವೆ ಎಂದು ಹೇಳುತ್ತಾರೆ. ಹೀಗೆ ಆದರೆ ಬಡವರು ಏನು ಮಾಡಬೇಕು ಎಂದು ಕಿರಣ್ ಅಸಹಾಯಕರಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಇದರ ಹಿಂದೆ ಆನ್ ಲೈನ್ ವಂಚಕರ ಕೈವಾಡವಿದ್ದು, ಹೋದ ಹಣ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
Advertisement