– ಗೋವಾ ಪೊಲೀಸರ ತನಿಖೆಯಿಂದ ಶಾಕಿಂಗ್ ವಿಚಾರ ಬೆಳಕಿಗೆ
– ಯುವಕರಿಗೆ ಆಮಿಷ ಒಡ್ಡಿ ಬ್ಯಾಂಕ್ ಖಾತೆಯ ಮೂಲಕ ವಂಚನೆ
ಪಣಜಿ: ಸೈಬರ್ ಕಳ್ಳರು (Cyber Fraud) ಮೆಸೇಜ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವುದು ಹಳೇ ಸುದ್ದಿ. ಆದರೆ ಈಗ ಸೈಬರ್ ಕಳ್ಳರು ಬ್ಯಾಂಕ್ ಖಾತೆಯನ್ನೇ ಬಾಡಿಗೆಗೆ (Renting Bank Accounts) ಪಡೆದು ವಂಚನೆ ಎಸಗುತ್ತಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡುವಂತೆ ಯುವಕರಿಗೆ ಆಮಿಷವೊಡ್ಡುವ ಪ್ರಕರಣಗಳು ಗೋವಾ ಪೊಲೀಸರ (Goa Police) ತನಿಖೆಯಿಂದ ಬಯಲಾಗಿದೆ.
Advertisement
21 ವರ್ಷದ ಯುವಕ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಹೆಚ್ಚುವರಿ ಹಣ ಗಳಿಸಲು ಯುವಕ ತನ್ನ ಬ್ಯಾಂಕ್ ಖಾತೆಯನ್ನು ಬಾಡಿಗೆ ನೀಡಿದ್ದಾನೆ. ಮತ್ತಷ್ಟು ತನಿಖೆಗೆ ಇಳಿದಾಗ ಅನೇಕ ನಿರುದ್ಯೋಗಿ ಯುವಕರು ತಮ್ಮ ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಿಗಳಿಗೆ ಹೆಚ್ಚುವರಿ ಹಣಕ್ಕೆ ಬಾಡಿಗೆಗೆ ನೀಡುತ್ತಿರುವ ವಿಚಾರ ಗೊತ್ತಾಗಿದೆ ಗೋವಾ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಪಡ್ನೇಕರ್ ತಿಳಿಸಿದ್ದಾರೆ.
Advertisement
Advertisement
ಸ್ನೇಹಿತರ ಮೂಲಕ ಸಂಪರ್ಕ:
ವಂಚಕರು ಸಾಮಾನ್ಯ ಸ್ನೇಹಿತರ ಮೂಲಕ ಯುವಕರನ್ನು ಸಂಪರ್ಕಿಸುತ್ತಾರೆ. ಅವರು ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ನೀಡಲು ಸಿದ್ಧರಿದ್ದರೆ ಅವರಿಗೆ ಹಣವನ್ನು ನೀಡುತ್ತಾರೆ. ಬಾಡಿಗೆಗೆ ನೀಡುವ ವ್ಯಕ್ತಿಯ ಖಾತೆಯಿಂದ 1 ಲಕ್ಷ ರೂಪಾಯಿ ಮೌಲ್ಯದ ಪ್ರತಿ ವಹಿವಾಟು ನಡೆದರೆ ಆತನಿಗೆ 1,000 ರೂ. ಕಮಿಷನ್ ನೀಡುತ್ತಾರೆ. ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು
Advertisement
ವಂಚಕರು ಚೆಕ್ ಬುಕ್‌ನಲ್ಲಿ ಸಹಿ ಸೇರಿದಂತೆ ಬ್ಯಾಂಕ್ ಖಾತೆಯ ಎಲ್ಲಾ ಸಂಬಂಧಿತ ವಿವರಗಳು ಸರಿಯಾಗಿದೆಯೇ ಎಂಬುದನ್ನು ಖಚಿತ ಪಡಿಸಿ ಕೃತ್ಯ ಆರಂಭಿಸುತ್ತಾರೆ.
ವಂಚಕರು ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹಿಂಪಡೆಯಲು ಖಾತೆದಾರರನ್ನು ಕೇಳುತ್ತಾರೆ. ಮೊತ್ತವನ್ನು ಹಿಂಪಡೆದ ನಂತರ ಬ್ಯಾಂಕ್ ಖಾತೆದಾರನು ತನ್ನ ಕಮಿಷನ್ ತೆಗೆದುಕೊಂಡು ಉಳಿದ ಮೊತ್ತವನ್ನು ವಂಚಕರಿಗೆ ಪಾವತಿಸಬೇಕಾಗುತ್ತದೆ.
ಬೆಳಕಿಗೆ ಬಂದಿದ್ದು ಹೇಗೆ?
ವ್ಯಕ್ತಿಯೊಬ್ಬರು ಆನ್‌ಲೈನ್ ಟ್ರೇಡಿಂಗ್ ಮೂಲಕ ಸುಮಾರು 45 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದರು. ಯಾವ ಖಾತೆಗೆ ಈ ಹಣ ಜಮೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿದ್ದಾಗ 20 ರಿಂದ 25 ವರ್ಷದ ಯುವಕರು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ತಮ್ಮ ಖಾತೆಗೆ ಯಾರು ಅಥವಾ ಯಾವ ಸ್ಥಳದಿಂದ ಯಾರು ಹಣವನ್ನು ಜಮೆ ಮಾಡುತ್ತಾರೆ ಎಂಬ ಯಾವುದೇ ಪೂರ್ವಾಪರ ವಿಚಾರ ತಿಳಿದಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.