ಬೆಂಗಳೂರು: ಆನ್ಲೈನ್ ವ್ಯವಹಾರ (Online Money Transfer) ಹೆಚ್ಚಿದಂತೆ ಸೈಬರ್ ವಂಚಕರ ಜಾಲ ಬೃಹತ್ತಾಗಿ ಬೆಳೆದಿದ್ದು, ನೇರವಾಗಿ ಗ್ರಾಹಕರ ಖಾತೆಗೆ ಕನ್ನ ಹಾಕುವ ಕೆಲಸ ನಡೆಯುತ್ತಿದೆ.
ಹಾಗೆಯೇ 2019 ರಿಂದ 2023ರ ವರೆಗೆ ಸೈಬರ್ ಅಪರಾಧಗಳ (Cyber Crime) ಅಡಿಯಲ್ಲಿ ಬರೋಬ್ಬರಿ 722 ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು, 722 ಕೋಟಿ ರೂ. ನಷ್ಟವಾಗಿದೆ ಎಂಬ ಅಂಕಿ-ಅಂಶ ಇಲಾಖೆ ಬಿಡುಗಡೆ ಮಾಡಿದೆ. ಅದರಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಪೊಲೀಸರು ಸಂಗ್ರಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
Advertisement
Advertisement
ಅಲ್ಲದೆ, ಸೈಬರ್ ಅಪರಾಧಗಳಿಂದ ಎಚ್ಚರ ವಹಿಸುವಂತೆ ವಿಶೇಷ ಕೈಪಿಡಿ ಸಿದ್ಧಪಡಿಸಿದ್ದು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನೂ ಓದಿ: ಹಳೆಯ ದ್ವೇಷಕ್ಕೆ ಕತ್ತಿಯಿಂದ ಕಡಿದು ಯುವಕನ ಭೀಕರ ಹತ್ಯೆ
Advertisement
Advertisement
ಯಾವ ವರ್ಷ ಎಷ್ಟು ನಷ್ಟ?
2019ರಲ್ಲಿ ಸೈಬರ್ ಅಪರಾಧದಲ್ಲಿ ರಾಜ್ಯಕ್ಕೆ 71.27 ಕೋಟಿ ರೂ. ನಷ್ಟವಾಗಿತ್ತು, ಅದರಲ್ಲಿ 8.59 ಕೋಟಿ ರೂ.ಗಳನ್ನು ಪೊಲೀಸರು ಸಂಗ್ರಹಿಸಿಕೊಟ್ಟಿದ್ದಾರೆ. 2020ರಲ್ಲಿ 105.99 ಕೋಟಿ ರೂ. ನಷ್ಟವಾಗಿದ್ದು, 14.83 ಕೋಟಿ ರೂ. ವಸೂಲಿ ಮಾಡಿದ್ದಾರೆ. 2021ರಲ್ಲಿ 145.05 ಕೋಟಿ ನಷ್ಟವಾಗಿದ್ದು, 25.96 ಕೋಟಿ ರೂ. ವಸೂಲಿ, 2022ರಲ್ಲಿ 363.11 ಕೋಟಿ ಕಳೆದುಕೊಳ್ಳಲಾಗಿದ್ದು, 46.87 ಕೋಟಿ ವಸೂಲಿ ಮಾಡಿದ್ದಾರೆ. ಇನ್ನೂ 2023ರ ಪ್ರಸಕ್ತ ವರ್ಷದಲ್ಲಿ ಜನವರಿ ತಿಂಗಳ ಅಂತ್ಯದ ವರೆಗೆ 36.63 ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದ್ದು, ಪೊಲೀಸರು 1.03 ಕೋಟಿ ರೂ. ಮಾತ್ರ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೈಬರ್ ಕ್ರೈಂ ವಿಭಾಗ ಮಾಹಿತಿ ನೀಡಿದೆ.