ರಾಯಚೂರು: ಗೃಹಲಕ್ಷ್ಮಿ ಯೋಜನೆ (Gruhalakshmi Scheme) ನೋಂದಣಿಗೆ 200ರಿಂದ 300 ರೂ. ಶುಲ್ಕ ವಸೂಲಿ ಮಾಡುತ್ತಿದ್ದ 3 ಸೈಬರ್ (Cyber) ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.
Advertisement
ಸ್ಥಳೀಯ ಸೈಬರ್‌ಗಳು ಗ್ರಾಮ ಒನ್ (Grama One) ಕೇಂದ್ರದ ಐಡಿ, ಪಾಸ್‌ವರ್ಡ್ ಬಳಸಿಕೊಂಡು ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದರು. ಮೊಬೈಲ್‌ಗೆ ಮೆಸೇಜ್ ಬಂದಿರದಿದ್ದರೂ ನೋಂದಣಿ ಮಾಡುವುದಾಗಿ ಹೇಳಿ ಹಣ ವಸೂಲಿ ನಡೆಸಿದ್ದರು. ನೋಂದಣಿ ಮಾಡಿ ರಸೀದಿಯನ್ನು ಕೊಡಲಾಗುತ್ತಿತ್ತು. ಮಾನ್ವಿ ತಹಶಿಲ್ದಾರ್ ಎಲ್.ಡಿ.ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಟ್ಟಣದ ಎಕ್ಸೆಲ್ ಕಂಪ್ಯೂಟರ್ಸ್, ಲಕ್ಷ್ಮಿ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಧಾರಾಕಾರ ಮಳೆ – ಸೋರುತ್ತಿದ್ದ ಬಸ್‌ನಲ್ಲೂ ಕೊಡೆ ಹಿಡಿದು ಕುಳಿತ ಪ್ರಯಾಣಿಕ
Advertisement
Advertisement
ಮಾನ್ವಿ (Manvi) ಪಟ್ಟಣದ ಸಾದಾಪುರ ಗ್ರಾಮ ಒನ್ ಕೇಂದ್ರದ ಐಡಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಸೈಬರ್ ಕೇಂದ್ರದ ಮಾಲೀಕರ ವಿರುದ್ಧ ಅಧಿಕಾರಿಗಳು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ
Advertisement
Web Stories