ಬೆಂಗಳೂರು: ಬಿಟ್ ಕಾಯಿನ್ ಕಂಪನಿಯೊಂದರ ಖಾತೆಗಳಿಗೆ ಕನ್ನ ಹಾಕಿ 3.66 ಕೋಟಿಯನ್ನು ಸೈಬರ್ ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಮಹದೇವಪುರದ ಬಿಟ್ ಚಿಪರ್ ಲ್ಯಾಬ್ಸ್ ಎಲ್‍ಎಲ್‍ಪಿ ಗ್ರಾಹಕರು ಹಣ ಕಳೆದುಕೊಂಡಿದ್ದಾರೆ. ಕಂಪನಿಯ ಸಿಇಒ ಅಶಿಷ್ ಸೋನಿ ಸಿಐಡಿಯ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
Advertisement
ಬಿಟ್ ಚಿಪರ್ ಲ್ಯಾಬ್‍ನಲ್ಲಿ ವಿಮಲ್ ಸಾಗರ್ ತಿವಾರಿ ಹಾಗೂ ಗೋವಿಂದ್ ಕುಮಾರ್ ಸೋನಿ ಅವರು ವ್ಯಾಲೆಟ್ ಹೊಂದಿದ್ದಾರೆ. ಈ ಮೂಲಕ ಬಿಟ್ ಕಾಯಿನ್ ವ್ಯವಾಹರದಲ್ಲಿ ತೊಡಗಿದರು. ಎಲ್ಲ ಪಾಸ್‍ವರ್ಡ್‍ಗಳನ್ನು ವ್ಯಾಲೆಟ್‍ನಲ್ಲಿ ಸಂಗ್ರಹಿಸಿಲಾಗಿತ್ತು.
Advertisement
Advertisement
ಆದರೆ ಇದೇ ವರ್ಷದ ಜನವರಿ 11ರಿಂದ ಮಾರ್ಚ್ 11 ನಡುವೆ ವ್ಯಾಲೆಟ್‍ಗೆ ಲಾಗಿನ್ ಆಗಿ ಪಾಸ್‍ವರ್ಡ್ ಕದ್ದಿದ್ದಾರೆ. ಪಾಸ್‍ವರ್ಡ್ ಕದ್ದ ಬಳಿಕ ಖಾತೆಯಲ್ಲಿದ್ದ 3.66 ಕೋಟಿ ಮೌಲ್ಯದ ಬಿಟ್ ಕಾಯಿನ್ ಎಗ್ಗರಿಸಿದ್ದಾರೆ.
Advertisement
ಈ ಘಟನೆ ಸಂಬಂಧ ಸಿಐಡಿ ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿದೆ. ಅಲ್ಲದೆ ಸೈಬರ್ ಲ್ಯಾಬ್ ಸ್ಪೆಷಲಿಸ್ಟ್ ಗಳ ಮೊರೆ ಹೋಗಿದ್ದು ತನಿಖೆ ಚುರುಕುಗೊಳಿಸಲಾಗಿದೆ.