ಕೋಲ್ಕತ್ತಾ: ಬರ್ಮಿಂಗ್‍ಹ್ಯಾಮ್‌ನಲ್ಲಿ ಮುಕ್ತಾಯಗೊಂಡ 22ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 73 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದ 20ರ ಹರೆಯದ ಅಚಿಂತ್ ಶೆಯುಲಿ ಹುಟ್ಟೂರಿಗೆ ಆಗಮಿಸಿದ್ದಾರೆ. ಮನೆಗೆ ಆಗಮಿಸುತ್ತಿದ್ದಂತೆ ಅಚಿಂತ್, ತಾಯಿ ಪೂರ್ಣಿಮಾ ಶೆಯುಲಿ ಮಗ ಗೆದ್ದ ಚಿನ್ನದ ಪದಕವನ್ನು ನೋಡಿ ಕಣ್ಣೀರಿಟ್ಟರು.
Advertisement
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ ವೇಟ್ ಲಿಫ್ಟರ್‌ಗಳು ಪದಕ ಬೇಟೆ ಆರಂಭಿಸಿದ್ದು ವಿಶೇಷವಾಗಿತ್ತು. 20ರ ಯುವಕ ದಾಖಲೆಯ 313 ಕೆಜಿ ಬಾರ ಎತ್ತಿ ಚಿನ್ನ ಗೆದ್ದ ಅಚಿಂತ್ ಸಾಧನೆ ಗಮನಸೆಳೆಯಿತು. ಕೋಲ್ಕತ್ತಾದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಹೌರಾ ಜಿಲ್ಲೆಯ ದೇಲ್‍ಪುರದಲ್ಲಿರುವ ಮನೆಗೆ ಅಚಿಂತ್ ನಿನ್ನೆ ಆಗಮಿಸಿದರು. ಮಗ ಮನೆಗೆ ಬಂದ ಕೂಡಲೇ ಆತನ ಕೊರಳಲ್ಲಿದ್ದ ಚಿನ್ನದ ಪದಕವನ್ನು ನೋಡಿ ತಾಯಿ ಪೂರ್ಣಿಮಾ ಶೆಯುಲಿ ಕಣ್ಣೀರಿಟ್ಟರು. ಆ ಬಳಿಕ ಪದಕವನ್ನು ಮನೆಯಲ್ಲಿದ್ದ ತನ್ನ ಹರಿದ ಸೀರೆಯಲ್ಲಿ ಸುತ್ತಿ ಬೆಡ್‍ನ ಕೆಳಗೆ ಇಟ್ಟಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು. ಇದನ್ನೂ ಓದಿ: ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ
Advertisement
Advertisement
ಅಚಿಂತ್ ಹಿಂತಿರುಗಿ ಬಂದಾಗ ಮಾಧ್ಯಮದವರು, ಛಾಯಾಗ್ರಾಹಕರು ನಮ್ಮ ಮನೆಗೆ ಬರುತ್ತಾರೆ ಎಂದು ಗೊತ್ತಿತ್ತು. ಹಾಗಾಗಿ ಅಚಿಂತ್ ಈವರೆಗೆ ಗೆದ್ದಂತಹ ಟ್ರೋಫಿಗಳನ್ನು ಸ್ಟೂಲ್ ಮೇಲೆ ಇಟ್ಟಿದ್ದೇನೆ. ದೇಶಕ್ಕಾಗಿ ಚಿನ್ನ ಗೆಲ್ಲುತ್ತಾನೆ ಎಂದು ನಾನು ಕನಸಿನಲ್ಲೂ ಕೂಡ ಅಂದುಕೊಂಡಿರಲಿಲ್ಲ. ಇದೀಗ ಸಂತೋಷವಾಗಿದೆ. ನಾವು ಪಟ್ಟ ಕಷ್ಟಗಳ ನಡುವೆ ಈ ಗೆಲುವು ತುಂಬಾ ಸಂತೋಷ ನೀಡಿದೆ ಎಂದು ಪೂರ್ಣಿಮಾ ಶೆಯುಲಿ ಇಬ್ಬರು ಗಂಡುಮಕ್ಕಳಾದ ಅಲೋಕ್ ಹಾಗೂ ಅಚಿಂತ್‍ರನ್ನು ಬೆಳೆಸಲು ತಾವು ಪಟ್ಟ ಕಷ್ಟಗಳನ್ನೂ ಕೂಡ ನೆನಪಿಸಿಕೊಂಡರು. ಇದನ್ನೂ ಓದಿ: ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದ ಇಬ್ಬರು ಉಗ್ರರ ಹತ್ಯೆ- ಮೂವರು ಯೋಧರು ಹುತಾತ್ಮ
Advertisement
As the golden boy came back home after taking a small breather away from all the frenzy at his native place in Howrah, children and others rushed to him to shake their hands and take one selfie. #AchintaSheuli is the new sensation, inspiration for many. #CommonwealthGames2022 pic.twitter.com/sBDmhjcWOx
— Tamal Saha (@Tamal0401) August 9, 2022
ಕಷ್ಟದ ಜೀವನದ ಮೂಲಕ ಈ ಸಾಧನೆ ಮಾಡಿದ ಅಚಿಂತ್ ಶೆಯುಲಿ 2001ರ ನವೆಂಬರ್ 24 ರಂದು ಪಶ್ಚಿಮ ಬಂಗಾಳ ಜನಿಸಿದರು. ಬಡ ಕುಟುಂಬದವರಾದ ಶೆಯುಲಿ ತಂದೆ 2013ರಲ್ಲಿ ನಿಧನದ ಬಳಿಕ ಕುಟುಂಬದ ಭಾರವೆಲ್ಲ ಅಣ್ಣನ ಮೇಲಿತ್ತು. ಈ ವೇಳೆ ಶೆಯುಲಿ ಅಣ್ಣನ ಸಹಾಯಕ್ಕೆ ನಿಂತಿದ್ದರು. ಶೆಯುಲಿ ಅಣ್ಣ ಅಲೋಕ್ ಟೈಲರ್ ಆಗಿದ್ದು ಬಟ್ಟೆಗಳನ್ನು ಹೊಲಿದು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಬಟ್ಟೆಗಳಿಗೆ ಬಟನ್ ಹಾಕಿ ಹೊಲಿಗೆಗೆ ಶೆಯುಲಿ ಸಹಾಯ ಮಾಡುತ್ತಿದ್ದರು. ಜೊತೆಗೆ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿದ್ದರು. ಆ ಬಳಿಕ ಅಣ್ಣನ ಮಾತಿನಂತೆ ವೇಟ್‍ಲಿಫ್ಟಿಂಗ್‍ನಲ್ಲಿ ಆಸಕ್ತಿತೋರಿ ತರಬೇತಿ ಪಡೆದರು. ಇದೀಗ ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಈ ಸಾಧನೆಯ ಹಿಂದೆ ಅಚಿಂತ್ ಅದೇಷ್ಟೂ ತ್ಯಾಗಗಳನ್ನು ಮಾಡಿದ್ದಾರೆ. ಕಾಮನ್‍ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಅಚಿಂತ್ ಪದಕವನ್ನು ಅಣ್ಣ ಅಲೋಕ್ ಹಾಗೂ ಕೋಚ್ ಆಸ್ತಮ್ ದಾಸ್‍ಗೆ ಅರ್ಪಿಸಿದ್ದರು.