ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ದಿವ್ಯಾ ಕಕ್ರನ್ ಅವರು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿದ್ದು, ಸ್ಪರ್ಧೆಗಾಗಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಈವರೆಗೂ ನನಗೆ ಯಾವುದೇ ಸರ್ಕಾರದಿಂದ ಸಹಾಯ ಸಿಗಲಿಲ್ಲ ಎಂದು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ವಿಂಡೀಸ್ ವಿರುದ್ಧದ ಕೊನೆಯ T20 ಪಂದ್ಯಕ್ಕೆ ರೋಹಿತ್ ಚಕ್ಕರ್ – ಕಾಮನ್‍ವೆಲ್ತ್ ಫೈನಲ್ ನೋಡಲು ಹಾಜರ್
Advertisement
शाबाश पहलवानों।
हमारे पहलवानों ने कॉमनवेल्थ खेलों में धूम मचा दी है। कुश्ती में भारत को एक ही दिन में कुल 6 मेडल मिले, जिसमें 3 गोल्ड हैं। साक्षी मलिक और दीपक पुनिया को उनके गोल्ड ???? और दिव्या काकरन एवं मोहित ग्रेवाल को कांस्य पदक के लिए बहुत-बहुत बधाई। pic.twitter.com/2eyHQ15xXK
— Arvind Kejriwal (@ArvindKejriwal) August 6, 2022
Advertisement
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಪಟು ದಿವ್ಯಾ ಕಕ್ರನ್ ಕಂಚಿನ ಪದಕ ಗೆದ್ದರು. ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ದಿವ್ಯಾ ತನಗೆ ದೆಹಲಿ ಸರ್ಕಾರದಿಂದ ಸಹಾಯ ನೀಡಬೇಕು ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಕುಸ್ತಿಪಟು ದಿವ್ಯಾ, ನನ್ನನ್ನು ಅಭಿನಂದಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ 20 ವರ್ಷಗಳಿಂದ, ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ಜೊತೆಗೆ ಕುಸ್ತಿಯನ್ನು ನಿರಂತರ ಅಭ್ಯಾಸ ಮಾಡುತ್ತಿದ್ದೇನೆ. ಆದರೆ ನನಗೆ ಯಾವುದೇ ಸರ್ಕಾರದಿಂದ ಸಹಾಯ ಸಿಗಲಿಲ್ಲ ಎಂದು ಬೇಸರಿಸಿದ್ದಾರೆ.
Advertisement
मेडल की बधाई देने पर दिल्ली के माननीय मुख्यमंत्री जी को तहे दिल से धन्यवाद मेराआपसे एक निवेदन है की मै पिछले 20 साल से दिल्ली मे रह रही हू ओर यही अपने खेल कुश्ती का अभ्यास कर रही हू परंतुअब तक मुझे राज्य सरकारसे किसी तरह की कोई इनाम राशि नही दी गई न कोई मदद दी गई @ArvindKejriwal
— Divya kakran (@DivyaWrestler) August 7, 2022
ದೆಹಲಿಯವರೇ ಆಗಿದ್ದರೂ ಬೇರೆ ರಾಜ್ಯದ ಪರ ಆಡುತ್ತಿರುವ ಇತರ ಆಟಗಾರರನ್ನು ಗೌರವಿಸುವ ರೀತಿಯಲ್ಲಿಯೇ ನನ್ನನ್ನು ಗೌರವಿಸಬೇಕೆಂಬುದು ನನ್ನ ವಿನಂತಿ ಎಂದು ತಿಳಿಸಿದ್ದಾರೆ.
ನಾನು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಾಗ, ನನಗೆ ಯಾವ ಸಹಾಯವೂ ಸಿಗಲಿಲ್ಲ. ನಾನು ತುಂಬಾ ಕಠಿಣ ಪರಿಸ್ಥಿತಿಗಳಿಂದ ಬಂದಿದ್ದೇನೆ. ಬಡಮಕ್ಕಳನ್ನು ಬೆಂಬಲಿಸುವ ಬಗ್ಗೆ ಯೋಚಿಸಬೇಕು. ಇಂದು ನೀವು ನಮ್ಮನ್ನು ಇಲ್ಲಿಗೆ ಕರೆದಿದ್ದೀರಿ ಆದರೆ ನಮಗೆ ಹೆಚ್ಚು ಅಗತ್ಯವಿರುವಾಗ, ಯಾರೂ ನಮಗೆ ಸಹಾಯ ಮಾಡುವುದಿಲ್ಲ. ನಮಗೆ ಹೆಚ್ಚು ಅಗತ್ಯವಿರುವಾಗ ನಾವು ಬೆಂಬಲವನ್ನು ಪಡೆದರೆ, ನಾವು ಶೇ.100 ಪರಿಶ್ರಮವನ್ನು ಕ್ರೀಡೆಯಲ್ಲಿ ತೋರಿಸಬಹುದು. ಚಿನ್ನವನ್ನು ಸಹ ಗೆಲ್ಲಬಹುದು. CWG ಸಮಯದಲ್ಲಿ ನಾನು ಪದಕ ಗೆದ್ದಾಗ, ನೀವು ಕರೆ ಮಾಡಿ ನಮಗೆ ಸಹಾಯ ಮಾಡುವುದಾಗಿ ಹೇಳಿದ್ದೀರಿ. ನಾನು ಏಷ್ಯನ್ ಗೇಮ್ಸ್‌ಗೆ ತರಬೇತಿಗಾಗಿ ಬೆಂಬಲವನ್ನು ಕೇಳಿದ್ದೆ, ಆದರೆ ಏನೂ ಆಗಲಿಲ್ಲ. ಈ ಸಂಬಂಧ ಪತ್ರಗಳನ್ನೂ ಬರೆದೆ. ಆದರೆ ಅದರ ನಂತರ ಯಾರೂ ನನ್ನ ಕರೆಗಳನ್ನು ಸ್ವೀಕರಿಸಲಿಲ್ಲ. ಇಂದು ನಾನು ಪ್ರಶಂಸೆಗಳನ್ನು ಪಡೆಯುತ್ತಿದ್ದೇನೆ. ಆದರೆ ನಾನು ಬಯಸಿದಾಗ, ನನಗೆ ಬೆಂಬಲ ಸಿಗಲಿಲ್ಲ. ದಯವಿಟ್ಟು ಈಗಿನ ಮಕ್ಕಳ ಬಗ್ಗೆ ಯೋಚಿಸಿ. ದೆಹಲಿಯು ಕೆಲವೇ ಪದಕಗಳನ್ನು ಪಡೆದಿದೆ. ಹರಿಯಾಣವನ್ನು ನೋಡಿ, ಪದಕ ಗೆದ್ದವರಿಗೆ 3 ಕೋಟಿ ಕೊಡುತ್ತಾರೆ. ದೆಹಲಿ ಈಗ ಈ ಮೊತ್ತವನ್ನು 20 ಲಕ್ಷದಿಂದ 1 ಕೋಟಿಗೆ ಏರಿಸಲು ನಿರ್ಧರಿಸಿದೆ ಎಂದು ದಿವ್ಯಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: Well Done Girls: ಗೋಲ್ಡ್ ಜಸ್ಟ್ ಮಿಸ್ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು
बहिन पूरे देश को आपपर गर्व है। लेकिन मुझे याद नहीं आता कि आप दिल्ली की तरफ से खेलती हैं। आप हमेशा उत्तर प्रदेश की तरफ से खेलती आईं है।
लेकिन खिलाड़ी देश को होता है।योगी आदित्यनाथ जी से आप को सम्मान की उम्मीद नहीं है।मुझे लगता है कि दिल्ली के मुख्यमंत्री आपकी बात जरूर सुनेंगे। https://t.co/WgxwpWJHR1
— Saurabh Bharadwaj (@Saurabh_MLAgk) August 7, 2022
ದಿವ್ಯಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್, ಸಹೋದರಿ, ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ನೀವು ದೆಹಲಿಯ ಪರ ಆಡಿದ್ದು ನನಗೆ ನೆನಪಿಲ್ಲ. ಆದರೆ ನೀವು ಉತ್ತರ ಪ್ರದೇಶವನ್ನು ಪ್ರತಿನಿಧಿಸಿ ಆಡಿದ್ದೀರಿ. ಆದರೆ ಒಬ್ಬ ಆಟಗಾರ ದೇಶಕ್ಕೆ ಸೇರಿದವನು. ಯೋಗಿ ಆದಿತ್ಯನಾಥ್ ಅವರಿಂದ ನೀವು ಯಾವುದೇ ಪ್ರಶಸ್ತಿಗಳನ್ನು ನಿರೀಕ್ಷಿಸುವುದಿಲ್ಲ. ದೆಹಲಿ ಸಿಎಂ ನಿಮ್ಮ ಮನವಿಗೆ ಸ್ಪಂದಿಸುತ್ತಾರೆಂಬ ಭರವಸೆ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಸರ್ಕಾರವು ದೇಶದ ಎಲ್ಲಾ ಕ್ರೀಡಾಪಟುಗಳನ್ನು ಗೌರವಿಸುತ್ತದೆ. ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತದೆ. ದಿವ್ಯಾ ಕಕ್ರನ್ ಸದ್ಯ ಉತ್ತರಪ್ರದೇಶ ಪರ ಆಡುತ್ತಿದ್ದಾರೆ. ಅವರು ದೆಹಲಿಯ ಪರವಾಗಿ ಆಡಿದ್ದರೆ ಅಥವಾ ದೆಹಲಿಯಲ್ಲಿ ಯಾವುದೇ ಕ್ರೀಡಾ ಯೋಜನೆಯ ಭಾಗವಾಗಿದ್ದರೆ ಅಥವಾ ಅಂತಹ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ರಾಜ್ಯ ಸರ್ಕಾರ ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತದೆ ಎಂದು ಸಹ ವಕ್ತಾರ ಪ್ರತಿಕ್ರಿಯಿಸಿದ್ದಾರೆ. ಕುಸ್ತಿಪಟು ದಿವ್ಯಾಗೆ ಅಗತ್ಯ ಸಹಾಯದ ಭರವಸೆಯನ್ನು ಸಿಎಂ ಕೇಜ್ರಿವಾಲ್ ಕೂಡ ನೀಡಿದ್ದಾರೆ.