ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್ (Congress) ಹಲವು ಬದಲಾವಣೆಗೆ ಮುಂದಾಗಿದೆ. ದೆಹಲಿಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಸಿತ್ತು.
ಸೋನಿಯಾ ಗಾಂಧಿ(Sonia Gandhi), ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ರಾಜೀನಾಮೆ ನೀಡ್ತಾರೆ ಅಂತ ಸುದ್ದಿಯಾಗಿತ್ತು. ಆದರೆ ಇದನ್ನು ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ (Randeep Surjewala) ತಿರಸ್ಕರಿಸಿದರು.
Congress Working Committee meeting begins. The meeting is being chaired by party's interim president Sonia Gandhi pic.twitter.com/czj37hmjKX
— ANI (@ANI) March 13, 2022
ಇಂದಿನ ಕಾಂಗ್ರೆಸ್ ವರ್ಕಿಂಗ್ ಕಮಿಟಿ(CWC) ಸಭೆಯಲ್ಲಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ(AICC) ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕು ಅನ್ನೋ ಒತ್ತಾಯ ಕೇಳಿಬಂದಿದೆ. ಇದನ್ನೂ ಓದಿ: ನಿಮ್ಮನ್ನ ಚಾಮುಂಡೇಶ್ವರಿ ಕ್ಷೇತ್ರದ ಜನರೇ ತಿರಸ್ಕಾರ ಮಾಡಿದ್ದಾರೆ: ಸಿದ್ದು ಕಾಲೆಳೆದ ಬಿಜೆಪಿ
Rahul Gandhi should become the party president. For the last 3 decades, nobody from the Gandhi family became a PM or a minister. It is significant to understand that the Gandhi family is important for Congress' unity: Rajasthan CM & Congress leader Ashok Gehlot pic.twitter.com/N4tohThUyc
— ANI (@ANI) March 13, 2022
ಸೆಪ್ಟೆಂಬರ್ ಗೆ ನಡೆಯಲಿರುವ ಆಂತರಿಕ ಚುನಾವಣೆಗೂ ಮೊದಲೇ ರಾಹುಲ್ ಗಾಂಧಿ ಜವಬ್ದಾರಿ ವಹಿಸಿಕೊಳ್ಳಬೇಕು. ಪ್ರಧಾನಿ ಮೋದಿ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರತಿ ಭಾಷಣದಲ್ಲೂ ರಾಹುಲ್ ಟಾರ್ಗೆಟ್ ಆಗಿದ್ದಾರೆ ಅಂದ್ರೆ ರಾಹುಲ್ ಗಾಂಧಿ ಪ್ರಬಲ ಸ್ಪರ್ಧಿ ಎಂದು ಅವರಿಗೆ ತಿಳಿದಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಹೇಳಿದ್ದಾರೆ.
Delhi | Congress interim president Sonia Gandhi, senior Congress leaders Mallikarjun Kharge and Ambika Soni arrive for Congress Working Committee (CWC) meeting at AICC office to discuss poll debacle in 5 states and the current political situation pic.twitter.com/2xJ0BneIms
— ANI (@ANI) March 13, 2022
ದೆಹಲಿಯ ಕಾಂಗ್ರೆಸ್ ನಾಯಕರನ್ನು ಒಳಗೊಂಡ ಗುಂಪು, ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ ಶ್ರೀನಿವಾಸ್ ಸೇರಿ ಹಲವರು ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಸಸಿದರು. ಇದನ್ನೂ ಓದಿ: ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ, ನನಗೆ ಯಾವುದೇ ಆಸೆಯಿಲ್ಲ: ಬಿ.ವೈ.ವಿಜಯೇಂದ್ರ
Congress leader Rahul Gandhi arrives at AICC office for Congress Working Committee (CWC) meeting to discuss poll debacle in 5 states and the current political situation pic.twitter.com/Cj46fmxVrL
— ANI (@ANI) March 13, 2022
ಈ ನಡುವೆ ಜಿ23 ನಾಯಕರು ಮುಕುಲ್ ವಾಸ್ನಿಕ್ ಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಈ ನಡುವೆ ಒತ್ತಾಯಿಸಿದ್ದಾರೆ. ಉತ್ತರಾಖಂಡ್ ಗೆಲುವಿಗೆ ಕಾರಣರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ತು. ಈ ವೇಳೆ ಮಾತಾನಾಡಿದ ಜೋಶಿ, ಡಿಕೆಶಿ ಗೋವಾಕ್ಕೆ ಹೋಗಿರೋ ಬಗ್ಗೆ ವ್ಯಂಗ್ಯವಾಡಿದ್ರು. ತೋಳ್ಬಲ ಹಾಗೂ ಗೂಂಡಾಗಿರಿ ಮಾಡಲು ಡಿಕೆಶಿ ಗೋವಾಗೆ ಹೋಗಿದ್ರಾ..? ಕಾಂಗ್ರೆಸ್ ನಡೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ ವ್ಯಂಗ್ಯವಾಡಿದ್ರು.