ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿಯ ಮದುವೆ ಮುಗಿದು ವರ್ಷವೇ ಕಳೆದಿದೆ. ಆದ್ರೆ ರೆಡ್ಡಿ ಮಗಳ ಮದುವೆಯ ವಿವಾದ ಮಾತ್ರ ಇನ್ನೂ ಮುಗಿಯುತ್ತಿಲ್ಲ.
ಪುತ್ರಿ ಬ್ರಹ್ಮಣಿಯ ವಿವಾಹಕ್ಕೆ ನೂರಾರು ಕೋಟಿ ಖರ್ಚು ಮಾಡಿದ ಬಗ್ಗೆ ದೂರು ನೀಡಿದ್ರೂ ತನಿಖೆ ನಡೆಸದ ಸಿಬಿಐ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸೆಕ್ಷನ್ ಆಫೀಸರ್ ಅರವಿಂದ ಕುಮಾರ್ ಸಿಬಿಐನ ಜಂಟಿ ನಿರ್ದೇಶಕ ಎ.ಕೆ ಶರ್ಮಾರವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಅಕ್ಟೋಬರ್ 25ರಂದು ಬರೆದಿರುವ ಪತ್ರದ ಪ್ರತಿ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಮಾಜಿ ಸಚಿವ ಜನಾರ್ದನರೆಡ್ಡಿ ತಮ್ಮ ಪುತ್ರಿಯ ಮದುವೆಗೆ ನೂರಾರು ಕೋಟಿ ಹಣ ಖರ್ಚು ಮಾಡಿದ್ದರು. ಈ ಮದುವೆ ಖರ್ಚಿಗೆ ಓಬಳಾಪುರ ಮೈನಿಂಗ್ ಕಂಪನಿಯ ಅಂಗಸಂಸ್ಥೆಯಾದ ಟ್ಯೂಬೂಲಾರ್ ರೆವಿಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಿದಿತಾ ಎಂಟರ್ ಪ್ರೈಸಸ್ ಕಂಪನಿಗಳ ಆದಾಯವೇ ಮೂಲವೆಂದು ತಿಳಿಸಿದ್ದರು.
Advertisement
ಆದ್ರೆ ಸಿಬಿಐ ಅಧಿಕಾರಿಗಳ ಪ್ರಕಾರ ಓಬಳಾಪುರ ಮೈನಿಂಗ್ ಕಂಪನಿ ಅಸ್ಥಿತ್ವದಲ್ಲಿಲ್ಲ, ಹೀಗಾಗಿ ಮಗಳ ಮದುವೆಗೆ ಬೇನಾಮಿ ಹಣ ಖರ್ಚು ಮಾಡಿದ ಬಗ್ಗೆ ಗಣಿ ಉದ್ಯಮಿ ಟಪಾಲ ಗಣೇಶ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಈ ಪತ್ರದ ಆಧಾರದ ಮೇಲೆ ಇದೀಗ ಸಿವಿಸಿ ತನಿಖೆ ನಡೆಸಲು ಮುಂದಾಗಿದ್ದು, ರೆಡ್ಡಿಗೆ ಮತ್ತಷ್ಟು ಸಂಕಷ್ಟ ತಂದಿದೆ.
Advertisement
https://www.youtube.com/watch?v=gSJ3qGxzb9E
https://www.youtube.com/watch?v=Y6SdnI1txBc
https://www.youtube.com/watch?v=_DhPa8YfeIs