– ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಗೆದ್ದ ಭಾರತ
– ಕೊಹ್ಲಿ ಪಂದ್ಯ ಶ್ರೇಷ್ಠ, ರೋಹಿತ್ ಸರಣಿ ಶ್ರೇಷ್ಠ
ಕಟಕ್ : ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತ ವಿಂಡೀಸ್ ವಿರುದ್ಧ ಸತತ 10 ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.
ಬಾರಾಬತಿ ಸ್ಟೇಡಿಯಂನಲ್ಲಿ ನಾಯಕ ವಿರಾಟ್ ಕೊಹ್ಲಿ ಔಟಾದಾಗ ಭಾರತ ಗೆಲ್ಲುತ್ತಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಕೊನೆಯ ಸ್ಲಾಗ್ ಓವರ್ ಗಳಲ್ಲಿ ಶಾರ್ದೂಲ್ ಠಾಕೂರ್ ಎರಡು ಬೌಂಡರಿ, ಒಂದು ಸಿಕ್ಸರ್ ಚಚ್ಚಿ ಪಂದ್ಯಕ್ಕೆ ತಿರುವುಕೊಟ್ಟರು. ಕೊನೆಯಲ್ಲಿ ಜಡೇಜಾ ಉತ್ತಮವಾಗಿ ಆಡಿದ್ದರಿಂದ ಭಾರತ ವಿಂಡೀಸ್ ನೀಡಿದ್ದ 316 ರನ್ ಗಳ ಗುರಿಯನ್ನು ಇನ್ನೂ 8 ಎಸೆತ ಇರುವಂತೆಯೇ ಜಯಗಳಿಸಿತು.
Advertisement
It’s 2-1 India! Virat Kohli and Co. beat West Indies by four wickets in the third ODI to cap off 2019 with a series win. ????????????????#INDvWI #TeamIndia @paytm pic.twitter.com/fJpP37tEBJ
— BCCI (@BCCI) December 22, 2019
Advertisement
46.1 ಓವರಿನಲ್ಲಿ ವಿರಾಟ್ ಕೊಹ್ಲಿ 85 ರನ್ (81ಎಸೆತ, 9 ಬೌಂಡರಿ,)ಗಳಿಸಿ ಆರನೇಯವರಾಗಿ ಔಟಾದಾಗ ಭಾರತದ ಸ್ಕೋರ್ 286 ಆಗಿತ್ತು. ಈ ವೇಳೆ ಕ್ರೀಸಿಗೆ ಆಗಮಿಸಿದ ಶಾರ್ದೂಲ್ ಠಾಕೂರ್ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ನಂತರ 17 ರನ್( 6 ಎಸೆತ, 2 ಬೌಂಡರಿ, 1 ಸಿಕ್ಸರ್)ಹೊಡೆದರು. ಜಡೇಜಾ ಮತ್ತು ಶಾರ್ದೂಲ್ 7ನೇ ವಿಕೆಟಿಗೆ 15 ಎಸೆತಗಳಲ್ಲಿ 30 ರನ್ ಹೊಡೆಯುವ ಮೂಲಕ ಜಯವನ್ನು ತಂದಿಟ್ಟರು. ಜಡೇಜಾ ಔಟಾಗದೇ 39ರನ್(31 ಎಸೆತ, 4 ಬೌಂಡರಿ) ಹೊಡೆದರು.
Advertisement
ಭಾರತ ತಂಡಕ್ಕೆ ಆರಂಭಿಕರಾದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ 122 ರನ್ಗಳ ಕಾಣಿಕೆ ನೀಡಿತು. ತಲಾ ಅರ್ಧಶತಕ ಸಿಡಿಸಿ ಮಿಂಚಿದ ಈ ಜೋಡಿ 63 ರನ್ (63 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದ ರೋಹಿತ್ ಶರ್ಮಾ ಹೋಲ್ಡರ್ ಅವರಿಗೆ ವಿಕೆಟ್ ಒಪ್ಪಿಸಿದಾಗ ಬೇರ್ಪಟಿತು. ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ 77 ರನ್ (89 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಅಲ್ಜಾರಿ ಜೋಸೆಫ್ ಅವರಿಗೆ ವಿಕೆಟ್ ಒಪ್ಪಿಸಿದರು.
Advertisement
ಎಡವಿದ ಪಂತ್, ಕೊಹ್ಲಿ ಭರ್ಜರಿ ಬ್ಯಾಟಿಂಗ್:
ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡ ಭಾರತಕ್ಕೆ ಅಸರೆಯಾದ ನಾಯಕ ವಿರಾಟ್ ಕೊಹ್ಲಿ 85 ರನ್ (81 ಎಸೆತ, 9 ಬೌಂಡರಿ) ಸಿಡಿಸಿ ಮಿಂಚಿದರು. ಆದರೆ ಇವರಿಗೆ ತಕ್ಕ ಸಾಥ್ ನೀಡುವಲ್ಲಿ ವಿಫಲರಾದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಕೇದರ್ ಜಾಧವ್ ಅವರು, ಒಂದಕ್ಕಿಗೆ ಔಟ್ ಅಗುವ ಮೂಲಕ ಪೆವಿಲಿಯನ್ ಪರೆಡ್ ನಡೆಸಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದು ಮಿಂಚಿದ್ದ ರಿಷಭ್ ಪಂತ್ ಕೇವಲ 7 ರನ್ ಸಿಡಿಸಿ ಕೀಮೋ ಪೌಲ್ ಅವರಿಗೆ ಬೌಲ್ಡ್ ಅದರು.
ನಾಯಕ ಕೊಹ್ಲಿ ಅವರ ನಿರ್ಗಮನದ ನಂತರ ಜೊತೆಯಾದ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಭರ್ಜರಿಯಾಗಿ ಬ್ಯಾಟ್ ಬೀಸಿ ಭಾರತವನ್ನು ಗೆಲುವಿನ ದಡ ಸೇರಿಸಿತು. ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಟಾಸ್ ಗೆದ್ದ ಭಾರತ ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಂಟಿಂಗ್ ಆಹ್ವಾನಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಗೆ ಎವಿನ್ ಲೆವಿಸ್ ಮತ್ತು ಶಾಯ್ ಹೋಪ್ ಅವರು ಉತ್ತಮ ಆರಂಭ ನೀಡಿದರು. ಮೊದಲ ಹತ್ತು ಓವರ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಆಟವಾಡಿದ ಆರಂಭಿಕ ಜೋಡಿ ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟವಾಡಿತು. ಇದರಲ್ಲಿ ಎವಿನ್ ಲೆವಿಸ್ ಅವರು 21 ರನ್ ಸಿಡಿಸಿ (50 ಎಸೆತ, 3 ಬೌಂಡರಿ) ಜಡೇಜಾ ವಿಕೆಟ್ ಒಪ್ಪಿಸಿದರೆ, 50 ಎಸೆತಗಳಲ್ಲಿ 42 ರನ್ (5, ಬೌಂಡರಿ) ಸಿಡಿಸಿ ಆಡುತ್ತಿದ್ದ ಶಾಯ್ ಹೋಪ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದರು.
ಇದಾದ ನಂತರ ಜೊತೆಯಾದ ರೋಸ್ಟರ್ ಚೇಸ್ ಮತ್ತು ಶಿಮ್ರನ್ ಹೆಟ್ಮೇಯರ್ ಅವರು 62 ರನ್ ಗಳ ತಾಳ್ಮೆಯ ಜೊತೆಯಾಟವಾಡಿದರು. ಆದರೆ ಈ ಇಬ್ಬರು ಆಟಗಾರರನ್ನು ಕಟ್ಟಿ ಹಾಕಿದ ಭಾರತದ ಬೌಲರ್ ನವ್ದೀಪ್ ಸೈನಿ ಇಬ್ಬರಿಗೂ ಪೆವಿಲಿಯನ್ ದಾರಿ ತೋರಿಸಿದರು. ಈ ಜೋಡಿಯ ನಿರ್ಗಮನದ ಬಳಿಕ ಜೊತೆಯಾದ ನಾಯಕ ಕೀರನ್ ಪೊಲ್ಲಾರ್ಡ್ ಮತ್ತು ನಿಕೋಲಸ್ ಪೂರನ್ ಅವರು ಅಬ್ಬರದ ಬ್ಯಾಟಿಂಗ್ ಮಾಡಿ ವೆಸ್ಟ್ ಇಂಡೀಸ್ ತಂಡವನ್ನು 300 ರ ಗಡಿದಾಟಿಸಿದರು.
T20I series ✅
ODI series ✅
Early X-mas presents for the fans as India end 2019 on a high.#INDvWI #TeamIndia @paytm pic.twitter.com/0pevT671RF
— BCCI (@BCCI) December 22, 2019
ಇನ್ನಿಂಗ್ಸ್ ನ 40ನೇ ಓವರ್ ಮುಕ್ತಾಯಕ್ಕೆ ವೆಸ್ಟ್ ಇಂಡೀಸ್ 197 ರನ್ ಗಳಿಸಿತ್ತು. ಬಳಿಕ ಪೋಲಾರ್ಡ್ ಹಾಗೂ ನಿಕೊಲಸ್ ಪೂರನ್ ಭರ್ಜರಿ ಬ್ಯಾಟಿಂಗ್ನಿಂದ ತಂಡದ ಮೊತ್ತ ಏರಿಕೆ ಕಂಡಿತು. ಈ ಜೋಡಿಯು 5ನೇ ವಿಕೆಟ್ಗೆ 135 ಗಳಿಸಿತು. 89 ರನ್ (64 ಎಸೆತ, 10 ಬೌಂಡರಿ, 3 ಸಿಕ್ಸರ್) ಗಳಿಸಿದ್ದ ಪೂರನ್ ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ವಿಕೆಟ್ ಒಪ್ಪಿಸಿದರು. ಆದರೆ ಕ್ರಿಸ್ ನಲ್ಲಿದ್ದ ಪೋಲಾರ್ಡ್ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿದರು. ವೆಸ್ಟ್ ಇಂಡೀಸ್ ತಂಡ ಇನ್ನಿಂಗ್ಸ್ ನ ಕೊನೆಯ ಐದು ಓವರ್ ಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಿಡಿಸಿತು. ಈ ಮೂಲಕ 5 ವಿಕೆಟ್ ನಷ್ಟಕ್ಕೆ 315 ರನ್ ಸಿಡಿಸಿತ್ತು.
Most International runs by an opener in a calendar year:
2434* – Rohit Sharma, 2019
2387 – Sanath Jayasuriya, 1997
2355 – Virender Sehwag, 2008
2349 – Matthew Hayden, 2003
2296 – Saeed Anwar, 1996#IndvWI
— Bharath Seervi (@SeerviBharath) December 22, 2019
22 ವರ್ಷದ ದಾಖಲೆ ಉಡೀಸ್
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು, ಮೊದಲ 9 ರನ್ ಸಿಡಿಸಿ 22 ವರ್ಷದ ಹಳೆಯ ದಾಖಲೆಯನ್ನು ಉಡೀಸ್ ಮಾಡಿದರು. ಒಂದು ವರ್ಷದಲ್ಲಿ ಆರಂಭಿಕನಾಗಿ ಅತೀ ಹೆಚ್ಚು ರನ್ ಸಿಡಿಸಿದ್ದ ಶ್ರೀಲಂಕಾದ ಲೆಜೆಂಡ್ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. 1997 ರಲ್ಲಿ ಉತ್ತಮವಾಗಿ ಆಟವಾಡಿದ್ದ ಜಯಸೂರ್ಯ ಅವರು 2387 ರನ್ ಸಿಡಿಸಿದ್ದರು. ಅವರ ಈ ದಾಖಲೆಯನ್ನು ಮುರಿದಿರುವ ರೋಹಿತ್ ಶರ್ಮಾ ಅವರು 2019 ರಲ್ಲಿ ಆರಂಭಿಕನಾಗಿ 2434 ಸಿಡಿಸಿದ್ದಾರೆ. ಇವರನ್ನು ಬಿಟ್ಟರೆ ಮೂರನೇ ಸ್ಥಾನದಲ್ಲಿ 2008 ರಲ್ಲಿ 2355 ಸಿಡಿಸಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಇದ್ದಾರೆ.