ಬೆಂಗಳೂರು: ಶ್ರೀರಾಮನ ಕಟೌಟ್ (CutOut) ಪಾದಚಾರಿಗಳ ಮೇಲೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್‌ಎಎಲ್ (HAL) ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದೆ.
ಅಯೋಧ್ಯೆಯ ರಾಮಮಂದಿರ (RamMandir) ಉದ್ಘಾಟನೆ ಹಿನ್ನೆಲೆ ಹೆಚ್‌ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲಿ ಪ್ರಭು ಶ್ರೀರಾಮನ ಬೃಹತ್ ಕಟೌಟ್‌ನ್ನು ಖಾಸಗಿ ಶಾಲೆಗೆ ಸೇರಿದ ಗೋಡೆಗೆ ಕಟೌಟ್ ಕಟ್ಟಲಾಗಿತ್ತು. ಕಾರ್ಯಕ್ರಮ ಮುಗಿದು 10 ದಿನಗಳಾದ್ರು ಕಟೌಟ್ ತೆರವುಗೊಳಿಸಿರಲಿಲ್ಲ. ಇದನ್ನೂ ಓದಿ: ಕೆಐಆರ್‌ಡಿಎಲ್ ಇಇ ಮನೆ ಮೇಲೆ ಲೋಕಾ ದಾಳಿ – ಆದಾಯಕ್ಕಿಂತಲೂ 165 ಪಟ್ಟು ಅಧಿಕ ಆಸ್ತಿ ಪತ್ತೆ
Advertisement
Advertisement
ಮಧ್ಯಾಹ್ನ ಭೋಜನ ವಿರಾಮ ಆರಂಭವಾಗುವ ಕೆಲವು ನಿಮಿಷಗಳ ಹಿಂದಷ್ಟೇ ಶ್ರಿರಾಮನ ಬೃಹತ್ ಕಟೌಟ್ ಧಿಡೀರ್ ಅಂತ ನೆಲಕ್ಕುರುಳಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಆದರೆ ಅದೇ ಸಮಯದಲ್ಲಿ ಪುಟ್‌ಪಾತ್ ಮೇಲೆ ಹೋಗುತ್ತಿದ್ದ ಪಾದಚಾರಿಗಳ ಮೇಲೆ ಕಟೌಟ್ ಬಿದಿದ್ದೆ. ಕಟೌಟ್ ಅಡಿ ಸಿಲುಕಿದ ಪಾದಚಾರಿಗಳನ್ನು ಕೂಡಲೇ ಸ್ಥಳೀಯರು ಹೊರ ಎಳೆದಿದ್ದಾರೆ. ಘಟನೆಯಲ್ಲಿ ಮೂರು ಮಂದಿಗೆ ಗಂಭೀರ ಗಾಯಗಳಾಗಿವೆ ಬಳಿಕೆ ಬಳಿಕ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಕಾರವಾರದಲ್ಲಿ ಒಂದೇ ದಿನ 8 ಮಂದಿಯಲ್ಲಿ ಮಂಗನಕಾಯಿಲೆ ಪತ್ತೆ
Advertisement
Advertisement
ಕಟೌಟ್ ಅಳವಡಿಕೆ ವೇಳೆ ಸರಿಯಾದ ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆ ಕಟೌಟ್ ನೆಲಕ್ಕುರುಳಿದೆ. ಸದ್ಯ ಕಟೌಟ್‌ಗೆ ಹಾಕಿದ್ದ ಮರವನ್ನೆಲ್ಲ ಒಂದೆಡೆ ತೆಗೆದು ಹಾಕಲಾಗಿದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆ 5 ವರ್ಷಗಳ ಕಾಲ ಮುಂದುವರಿಯಲಿದೆ: ಡಿಕೆಶಿ